Latest

ಬೆಳಗಾವಿ ಶಾಸಕರನ್ನು ಹರಾಜು ಹಾಕಿದ ಕನ್ನಡ ಪರ ಸಂಘಟನೆಗಳು; ಎಂಇಎಸ್ ವಿರುದ್ಧ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿದ್ದು, ಎಂಇಎಸ್ ವಿರುದ್ಧ ದ್ವನಿ ಎತ್ತದ ಬೆಳಗಾವಿ ಶಾಸಕರನ್ನು ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರಿನ ಟೌನ್ ಹಾಲ್ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದು, ಎಂಇಎಸ್ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗುವಂತೆ ಆಗ್ರಹಿಸಿದ್ದಾರೆ. ಕರವೇ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು ಸಿಎಂ ಬೊಮ್ಮಾಯಿ ಭೇಟಿ ಮಾಡಿ ಎಂಇಎಸ್ ನಿಷೇಧಕ್ಕೆ ಮನವಿ ಮಾಡಲು ಮುಂದಾಗಿದ್ದಾರೆ.

Home add -Advt

ಇನ್ನೊಂದೆಡೆ ಮೈಸೂರಿನಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಗೆ ಚಪ್ಪಲಿ ತೋರಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ. ಹುಬ್ಬಳ್ಳಿ-ಧಾರವಾಡದಲ್ಲಿಯೂ ಪ್ರತಿಭಟನೆ ತೀವ್ರಗೊಳಿಸಿರುವ ಕನ್ನಡಪರ ಸಂಘಟನೆಗಳು, ಎಂಇಎಸ್ ಪುಂಡಾಟ ಮೆರೆಯುತ್ತಿದ್ದರೂ ಈ ಬಗ್ಗೆ ಮಾತನಾಡದ ಬೆಳಗಾವಿ ಶಾಸಕರು, ಸಚಿವರನ್ನು ಹರಾಜು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ವಟ್ಟಾಯಂ ನಲ್ಲಿ ಬಾಂಬ್ ಸ್ಫೋಟ; ನಾಲ್ವರು ರಾಜಕೀಯ ಕಾರ್ಯಕರ್ತರು ಬಲಿ

Related Articles

Back to top button