Belagavi NewsBelgaum NewsKannada NewsKarnataka NewsLatest

*ಕರವೇ ಕಾರ್ಯಕರ್ತರಿಗೆ ಮಹತ್ವದ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸುವ ದೃಷ್ಟಿಕೋನದಿಂದ ಇನ್ನು ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಬೇಕೆಂದು ಕರವೇ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ರವರು ಹೇಳಿದರು.

ನಗರದ ಪ್ರವಾಸಿ ಮಂದಿರ (ಸರ್ಕ್ಯೂಟ್ ಹೌಸ್) ದಲ್ಲಿ ನಡೆದ  ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ತಾಲೂಕಾ ಪಧಾದಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು 

Home add -Advt

ಬೆಳಗಾವಿ ತಾಲೂಕಿನಾಧ್ಯಂತ ಎಲ್ಲಾ ಗ್ರಾಮ ಘಟಕಗಳನ್ನು ಮಾಡಿ , ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಿ ಮಹಿಳಾ ಘಟಕ , ರೈತ ಘಟಕ , ಕಾರ್ಮಿಕ ಘಟಕ,ಯುವ ಘಟಕ  ಸಾಮಾಜಿಕ ಜಾಲತಾಣವನ್ನು ಬಲಿಷ್ಠ ಪಡಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಬೆಳಗಾವಿ ತಾಲೂಕಾ ಮಹಿಳಾ ಅಧ್ಯಕ್ಷರಾಗಿ ಕುಮಾರಿ”ತೇಜಸ್ವಿನಿ ಮಾಣೆ ರವನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಸುರೇಶ್ ಗವನ್ನವರ , ಗಣೇಶ ರೋಕಡೆ,  ದಶರಥ ಬನೋಶಿ,  ಬಾಳು ಜಡಗಿ , ಉದಯ ಚಿಕ್ಕಣ್ಣವರ, ತಾಲೂಕಾಧ್ಯಕ್ಷರಾದ ಸತೀಶ ಗುಡದವರ್, ಮಂಜುನಾಥ ರಾಠೋಡ, ಅರ್ಜುನ ಕಾಂಬ್ಳೆ, ಪ್ರಕಾಶ ಲಮಾಣಿ, ಬಸವರಾಜ ಅವರೊಳ್ಳಿ ಸೇರಿದಂತೆ ತಾಲೂಕಾ  ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button