ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕರ್ನಾಟಕ-ಮಹಾರಷ್ಟ್ರ ಗಡಿ ವಿವಾದ ತೀವ್ರಗೊಳ್ಳುತ್ತಿದ್ದು, ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಜತ್, ಅಕ್ಕಲಕೋಟ ತಾಲೂಕಿನ ಜನರ ಬೆನ್ನಲ್ಲೇ ಇದೀಗ ಸಿದ್ಧನಾಥ ಗ್ರಾಮಸ್ಥರೂ ತಮ್ಮನ್ನು ಕರ್ನಾಟಕ್ಕೆ ಸೇರಿಸುವಂತೆ ಪಟ್ಟು ಹಿಡಿದಿದ್ದಾರೆ. ಮಹಾರಾಷ್ಟ್ರದ ಸಿದ್ಧನಾಥ ಗ್ರಾಮದ ಜನರು ತಮ್ಮನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ್ ಮೂಲಕ ಠಾರಾವು ಪಾಸ್ ಮಾಡಿದ್ದಾರೆ.
ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ನೀರು ಒದಗಿಸಬೇಕು, ಮಹಿಶಾಳ ಏತನೀರಾವರಿ ಯೋಜನೆ, ಕೃಷಿ, ಶಿಕ್ಷಣ, ನೀರಾವರಿ ಸೌಲಭ್ಯ ಸಿದ್ಧನಾಥ ಗ್ರಾಮಕ್ಕೆ ಕನಸಾಗಿ ಉಳಿದಿದೆ. ಎಲ್ಲಾ ಸೌಲಭ್ಯಗಳಿಂದ ನಮ್ಮನ್ನು ಮಹಾರಾಷ್ಟ್ರ ಸರ್ಕಾರ ವಂಚಿತರನ್ನಾಗಿ ಮಾಡಿದೆ. ನಮ್ಮನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯ ಗಡಿಯಿಂದ ಕೇವಲ ಮೂರು ಕೀ.ಮೀ ದೂರದಲ್ಲಿ ಸಿದ್ಧನಾಥ ಗ್ರಾಮವಿದ್ದು, ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸುವಂತೆ ಘೋಷೆಣೆಗಳನ್ನು ಕೂಗಿದ್ದಾರೆ. ಕೈಯಲ್ಲಿ ಕನ್ನಡ ಬಾವುಟಗಳನ್ನು ಹಿಡಿದು ನಮಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ.
ಅಮಿತ್ ಶಾನಂತವರೇ ದೇಶದ ಹೋಂ ಮಿನಿಸ್ಟರ್ ಆಗಿದ್ದಾರೆ; BJPಯದ್ದು ಬದನೆಕಾಯಿ ನೀತಿ; ಕೆಂಡಕಾರಿದ ಸಿದ್ದರಾಮಯ್ಯ
https://pragati.taskdun.com/bjpamith-shahsiddaramaiahreactionrowdysheeter/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ