Kannada NewsKarnataka News

ಯುವಕಾಂಗ್ರೆಸ್ ನಿಂದ ಸೋಮವಾರ ಸುವರ್ಣವಿಧಾನಸೌಧ ಮುತ್ತಿಗೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭ್ರಷ್ಟಾಚಾರ, ಆಡಳಿತ ನಿಷ್ಕ್ರೀಯತೆ ಸೇರಿದಂತೆ ಸರಕಾರದ ವಿವಿಧ ಧೋರಣೆಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಸೋಮವಾರ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಿದೆ.

ಬೆಳಗ್ಗೆ 11 ಗಂಟೆಗೆ ಬಿ.ಎಸ್.ಯಡಿಯೂರಪ್ಪ ಮಾರ್ಗದ ಧಾರವಾಡ ಸರ್ಕಲ್ ಬಳಿಯಿಂದ ಸಾವಿರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ಹೊರಟು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೃಣಾಲ್‌ ಹೆಬ್ಬಾಳಕರ್ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹ್ಮದ್ ನಲ್ಪಾಡ್, ಹಲವು ಶಾಸಕರು, ಯುವ ಕಾಂಗ್ರೆಸ್ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಸಹಸ್ರುರು ಕಾರ್ಯಕರ್ತರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.

 

Home add -Advt

https://pragati.taskdun.com/session-will-be-held-as-usual-from-tomorrow-chief-minister-basavaraja-bommai/

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ OPS ಜಾರಿ ಭರವಸೆ? ಡಿ.ಕೆ.ಶಿವಕುಮಾರ್ ಸುಳಿವು

https://pragati.taskdun.com/ops-implementation-promised-in-congress-manifesto-dk-sivakumar-clue/

Related Articles

Back to top button