Kannada NewsNationalPolitics

*ಸ್ವಂತ ಮಗಳನ್ನೆ ಪಕ್ಷದಿಂದ ಉಚ್ಚಾಟಿಸಿದ ಕೆಸಿಆರ್*

ಪ್ರಗತಿವಾಹಿನಿ ಸುದ್ದಿ: ಬಿಆರ್ ಎಸ್ ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಕೆಸಿಆರ್ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿದಕ್ಕಾಗಿ ಸ್ವಂತ ಪುತ್ರಿಯನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಪಕ್ಷದಿಂದ ಉಚ್ಚಾಟಿಸಿದ್ದಾರೆ. 

ಪಕ್ಷದ ಅಧ್ಯಕ್ಷ ಆಗಿರುವ ಕೆಸಿಆರ್ ತಮ್ಮ ಪುತ್ರಿ ಕೆ ಕವಿತಾಳನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಕೆ ಕವಿತಾ ಪಕ್ಷದ ನೀತಿಗಳು ಮತ್ತು ತತ್ವಗಳಿಗೆ ವಿರುದ್ಧವಾದ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಲ್ಲದೇ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಕೆಸಿಆರ್ ಹೇಳಿದ್ದಾರೆ.

ನಿನ್ನೆಯಷ್ಟೇ ಕೆ ಕವಿತಾರವರು ಕೆಸಿಆರ್ ವ್ಯಕ್ತಿತ್ವಕ್ಕೆ ಹಾನಿ ಮಾಡಿದ್ದಾರೆ, ಪಕ್ಷದ ಸಹೋದ್ಯೋಗಿಗಳನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಬಿಆರ್‌ಎಸ್‌ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದ್ರು. ಕವಿತಾ ಅವರ ಉಚ್ಚಾಟನೆ ರಾಜಕೀಯ ವಲಯದಲ್ಲಿ ನಾನಾ ರೀತಿಯಲ್ಲಿ ಚರ್ಚೆಗೆ ಕಾರಣವಾಗಿದೆ. 

Home add -Advt

Related Articles

Back to top button