
ಪ್ರಗತಿ ವಾಹಿನಿ ಸುದ್ದಿ ನವದೆಹಲಿ
ಕಾಶ್ಮೀರಿ ಫೈಲ್ಸ್ ಚಿತ್ರದ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿರುವ ಟೀಕೆಗೆ ಕಿಡಿಕಾರಿರುವ ತೇಜಸ್ವಿ ಸೂರ್ಯ ಕೇಜ್ರಿವಾಲ್ ಬೇಷರತ್ ಕ್ಷಮೆ ಯಾಚಿಸದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ತೇಜಸ್ವಿ, ಅರವಿಂದ್ ಕೇಜ್ರಿವಾಲ್ ಕಾಶ್ಮೀರಿ ಪಂಡಿತರ ನೋವಿನ ಸಂಗತಿಯನ್ನು ಗೇಲಿ ಮಾಡಿದ್ದಾರೆ. ಇದಕ್ಕೆ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಕಳೆದ ವಾರ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿ, ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಿಯಾಯಿತಿ ನೀಡುವ ಬದಲು ಯೂ ಟ್ಯೂಬ್‌ನಲ್ಲಿ ಹಾಕಿಬಿಟ್ಟರೆ ಇಡೀ ದೇಶವೇ ಉಚಿತವಾಗಿ ನೋಡುತ್ತದೆ ಎಂದು ಲೇವಡಿ ಮಾಡಿದ್ದರು. ಕೇಜ್ರಿವಾಲ್‌ರ ಹೇಳಿಕೆ ಭಾರಿ ವಿವಾಧಕ್ಕೆ ಕಾರಣವಾಗಿತ್ತು.
ಕಾಶ್ಮೀರಿ ಫೈಲ್ಸ್ ಗೆ ನೀಡಿದ ಪ್ರೋತ್ಸಾಹವನ್ನು ದಂಡಿ ಚಿತ್ರಕ್ಕೂ ನೀಡಿ: ನಿರ್ದೇಶಕ ವಿಶಾಲ್ ರಾಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ