Latest

ಕೆಜಿಎಫ್-2 ಟೀಸರ್ ಸಂಕಷ್ಟ; ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟೀಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಜಿಎಫ್-2 ಸಿನಿಮಾ ಟೀಸರ್ ವಿಚಾರಕ್ಕೆ ಸಂಬಂಧಿಸಿದಂತೆ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟೀಸ್ ಜಾರಿ ಮಾಡಿದೆ.

ಕೆಜಿಎಫ್-2 ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ರಾಕಿ ಭಾಯ್ ಖದರ್ ಗೆ ಅಬಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬಂದೂಕಿನಿಂದ ಸಿಗರೇಟ್ ಹಚ್ಚುವ ಸೀನ್ ಇದ್ದು, ಈ ದೃಶ್ಯವನ್ನು ಕಂಡು ಜನರು ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅದೇ ದೃಶ್ಯ ಯಶ್ ಗೆ ಸಂಕಷ್ಟತಂದೊಡ್ಡಿದೆ.

ಈ ದೃಶ್ಯ ಯುವ ಸಮುದಾಯಕ್ಕೆ ಪ್ರಚೋದನಾಕಾರಿಯಾಗಿದ್ದು, ಕೆಜಿಎಫ್-2 ಟೀಸರ್ ನಲ್ಲಿರುವ ಸಿಗರೇಟ್ ಸೇದುವ ದೃಶ್ಯಕ್ಕೆ ಕತ್ತರಿ ಹಾಕಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಲ್ಲದೇ ನಟ ಯಶ್ ಸೇರಿದಂತೆ ಹಲವರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ.

Home add -Advt

Related Articles

Back to top button