Belagavi NewsBelgaum NewsCrimeKannada NewsKarnataka NewsNationalPolitics

*ಖಾನಾಪೂರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪೂರ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾ ಸೇವನೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಸ್ಟೇಶನ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಆರೋಪಿತನಾದ ಪ್ರಾನ್ಸಿಸ್ ಪಾಸ್ಕು ಸೋಜ ಕಾನೂನು ಬಾಹಿರವಾಗಿ ತಮ್ಮ 3 ಸಾವಿರ ರೂಪಾಯಿ ಮೌಲ್ಯದ 135 ಗ್ರಾಂ ತೂಕದಷ್ಟು ಒಣಗಿದ ತಪ್ಪಲು- ಬೀಜವಿರುವ ಗಾಂಜಾ ಮಾದಕ ಪದಾರ್ಥವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿ. ಈ ವೇಳೆ ವಶಕ್ಕೆ ಪಡೆದ ಪೊಲೀಸರು ಖಾನಾಪೂರ ಪೋಲೀಸ್ ಠಾಣಾ ಅಪರಾಧ ಸಂಖ್ಯೆ: 12/2026 ಕಲಂ: 20 [ಬಿ] ಎನ್.ಡಿ.ಪಿ.ಎಸ್ ಕಾಯ್ದೆ: 1985 ನೇ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಪ್ರಾನ್ಸಿಸ್ ಪಾಸ್ತು ಸೋಜನನ್ನು ವಿಚಾರಣೆ ಒಳ ಪಡಿಸಿದಾಗ  ಏಸುನಂದ್ ಪ್ರಾನ್ಸಿಸ್ ಸೋಜ ಇವನು ಮಾರಾಟ ಮಾಡಲು ತಂದು ಕೊಟ್ಟಿದ್ದ 

ಈ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪಿಗಳಾದ ರೇಹಮಾನ ಕುತ್ಥುದ್ದೀನ ಇಟಗಿ ಹಾಗೂ ರೋಹಿತ ದತ್ತಾರಾಮ ರಗಡೆ  ಇವರಿಗೆ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ. 

Home add -Advt

ಆರೋಪಿ ಪ್ರಾನ್ಸಿಸ್ ಸೋಜ ಇವನಿಗೆ ಗಾಂಜಾ ತಂದು ಕೊಟ್ಟ ಆರೋಪಿ ಏಸುನಂದ್ ಸೋಜ ಇವನ ಹಾಗೂ ಗಾಂಜಾ ಖರೀದಿಸಿದ ಆರೋಪಿತರ ಪತ್ತೆಗೆ ಪೊಲೀಸರು ಜಾಲ ಬಿಸಿದ್ದಾರೆ.

Related Articles

Back to top button