ಶಿವಾಜಿ ಎನ್ನುವವರ ಮನೆಯಲ್ಲಿ ಈ ಹಾವು ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಮನೆಯವರೆಲಲ್ ಕೂಲಿಗಾಗಿ ಹೊರಗೆ ಹೋಗಿದ್ದರು. ಸಂಜೆ ವಾಪಸ್ಸಾಗಿ ಬಾಗಿಲು ತೆಗೆದಾಗ ಶಾಕ್ ಆದರು. ಅವರಿಗಿಂತ ಮೊದಲೇ ಕಾಳಿಂಗ ಸರ್ಪ ಮನೆ ಸೇರಿ ಮಲಗಿಕೊಂಡಿತ್ತು.
ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಕಳಿಸಿದರು. ಸುಮಾರು 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಣಕುಂಬಿ ವಲಯ ಅರಣ್ಯ ಅಧಿಕಾರಿ ಕವಿತಾ ಈರನಟ್ಟಿ ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ಅರಣ್ಯದಲ್ಲಿ ಬಿಟ್ಟಿದ್ದಾರೆ.
ಕಾಳಿಂಗ ಸರ್ಪ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಾಸಿಸುವ ವಿನಾಶದ ಅಂಚಿನಲ್ಲಿರುವ ಅಪರೂಪದ ಜೀವಿ. ಇದು ಕೋಳಿಗಳನ್ನು ತಿನ್ನಲು ಬಂದು, ಶಿವಾಜಿ ಮನೆಯ ಬಳಿಯಿದ್ದ ಕೋಳಿಗಳನ್ನು ತಿಂದು ಹೊಟ್ಟೆ ತುಂಬಿದ್ದರಿಂದ ಮಲಗಿಕೊಂಡಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ