
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ರಾವಸಾಹೇಬ್ ದಾದರಾವ್ ದಾನ್ವೆಜಿ ಅವರನ್ನ ಭೇಟಿ ಮಾಡಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.
ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಸಾವಿನ ನಂತರ ಅವರ ನಿಯಂತ್ರಣದಲ್ಲಿದ್ದ ಕೆಲಸಗಳು ಮತ್ತು ಯೋಜನೆಗಳಾದ ಹೊಸ ರೈಲ್ವೇ ನಿಲ್ದಾಣ ಮತ್ತು ಮೂರನೇ ಗೇಟ್ ನಿರ್ಮಾಣವು ಮುಂದುವರಿಯುತ್ತಿಲ್ಲ. ಈ ಕಾಮಗಾರಿಗೆ ವೇಗ ನೀಡುವ ಕುರಿತು ಸಚಿವರಿಗೆ ವಿವರಿಸಿದ ಕಿರಣ ಜಾಧವ, ಕಾಮಗಾರಿಗೆ ವೇಗ ನೀಡಿ ಆದಷ್ಟು ಬೇಗ ಮುಗಿಸಲು ಮನವಿ ಮಾಡಿದರು.
ಜೊತೆಗೆ ಬೆಳಗಾವಿ ಆಗಮಿಸಿ ಕಾಮಗಾರಿಯ ಪರಿಶೀಲನೆ ನಡೆಸಬೇಕು ಎಂದೂ ಮನವಿ ಮಾಡಿದರು.
ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು ಎಂದು ಕಿರಣ ಜಾಧವ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ