*ಬೆಳಗಾವಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ: ಕಾನೂನು ಪರಿವರ್ತನೆ ತಂತ್ರಜ್ಞಾನ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ*
ಪ್ರಗತಿವಾಹಿನಿಸುದ್ದಿ; ಬೆಳಗಾವಿ: ಕಾನೂನು ವಿದ್ಯಾರ್ಥಿಗಳು ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡಲುತಂತ್ರಜ್ಞಾನದ ಮಾಸ್ಟರ್ ಆಗಬೇಕು ಎಂದು ಧಾರವಾಡ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಜೋಶಿ ಹೇಳಿದರು.
ಅವರು ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ನೆಹರು ನಗರದ ಜೆಎನ್ಎಂಸಿ ಬಿ.ಎನ್. ಕೋಡ್ಕಣಿ ಆಡಿಟೋರಿಯಂದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಪರಿವರ್ತನೆ ತಂತ್ರಜ್ಞಾನ ಕುರಿತ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಇಂದು ವೃತ್ತಿಪರರ ಏಕಸ್ವಾಮ್ಯ ಅಲ್ಲ. ಕಾನೂನು ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನಗಳ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು. ಇಂದು ಕಾನೂನು ಹೊಸ ತಂತ್ರಜ್ಞಾನಗಳತ್ತ ಹೊರಳುತ್ತಿದೆ. ಕಾಲಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು. ತಂತ್ರಜ್ಞಾನ ಇಂದು ನಮ್ಮ ಅಂಗೈಯಲ್ಲಿಯೇ ಇದೆ. ಅದನ್ನು ಸರಿಯಾಗಿ ತಿಳಿದುಕೊಂಡು ಅನಾವರಣಗೊಳಿಸುವುದು ಅಷ್ಟೇ ಮುಖ್ಯವಾಗಿದೆ. ಇದರಿಂದ ಹತ್ತುಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುಲು ಸಾಧ್ಯ ಎಂದು ಮಾರ್ಗದರ್ಶನ ಮಾಡಿದರು. ಯುಎಸ್‌ಎಡೀಪ್‌ಟೆಕ್‌ಎಕ್ಸಿಕ್ಯುಟಿವ್ ಡಾ.ಇಂಗ್ರಿಡ್ ವಾಸಿಲುಫೆಲ್ಟೆಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ ಇ ಸಂಸ್ಥೆ ನಿರ್ದೇಶಕಎಸ್.ಸಿ.ಮೆಟಗುಡ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು.ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯಗಳು ಇಂದು ಎಲ್ಲರೀತಿಯ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದರ ಮೂಲಕ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡುತ್ತಿದೆ. ಅದರ ಫಲವೆಂಬಂತೆ ನಮ್ಮ ಸಂಸ್ಥೆಯ ಬಹುಸಂಖ್ಯಾತ ವಿದ್ಯಾರ್ಥಿಗಳು ನ್ಯಾಯಾಧೀಶರಾಗಿ, ಕಾನೂನಿನ ಬೇರೆ ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಲ್ ಇ ಸಂಸ್ಥೆಯ ಕಾನೂನು ಅಕಾಡೆಮಿ ಮತ್ತು ಗಾಲ್ಟರ್ ಜಂಟಿಯಾಗಿ ಫೆಬ್ರವರಿ ೨೪-೨೬ ರ ವರೆಗೆ ಕೃತಕ ಬುದ್ಧಿಮತ್ತೆಯ ಅನುಕೂಲಗಳು ಮತ್ತು ಅನಾನುಕೂಲತೆಗಳ ಬಗ್ಗೆ ಮೂರು ದಿನಗಳ ಈ ಅಂತರಾಷ್ಟ್ರೀಯ ಸಮ್ಮೇಳನ ಚರ್ಚಿಸಲಿದೆ. ಕೃತಕ ಬುದ್ದಿಮತ್ತೆ, ಮೆಟಾ, ಬ್ಲಾಕ್‌ಚೈನ್(ಹೈಬ್ರಿಡ್ ಮೋಡ್ ) ಕುರಿತು ಚರ್ಚಿಸಲಿದೆ. ಗಾಲ್ಟರ್ ಸಂಸ್ಥಾಪಕ ಡಾ.ಎಂ.ಕೆ. ಭಂಡಾರಿ ಅವರು ಗಾಲ್ಟರ್ ಕರಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಂಚಾಲಕಿ ಎಲ್‌ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಪ್ರಾರ್ಥಿಸಿದರು. ಪ್ರಾಚಾರ್ಯಡಾ. ಬಿ. ಜಯಸಿಂಹ ಸ್ವಾಗತಿಸಿದರು. ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಿಯಾ ಶಹಾಪುರಕರ ನಿರೂಪಿಸಿದರು. ಅಂತರಾಷ್ಟ್ರೀಯ ಸಮ್ಮೇಳನದ ಸಂಚಾಲಕಿ ಹಾಗೂ ಹುಬ್ಬಳ್ಳಿ ಜಿ.ಕೆ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಶಾರದಾ ಪಾಟೀಲ ವಂದಿಸಿದರು. ಕೆಎಲ್‌ಇ ಸಂಸ್ಥೆಯ ಉಪಾಧ್ಯಕ್ಷರಾದ ಬಸವರಾಜತಟವಟಿ ಉಪಸ್ಥಿತರಿದ್ದರು. ದೇಶದ ವಿವಿಧ ಕಾನೂನು ಕಾಲೇಜುಗಳ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆಎಲ್ ಇ ಕಾನೂನು ಅಕಾಡೆಮಿ ಮತ್ತು ಗಾಲ್ಟರ್ ಜಂಟಿಯಾಗಿ ಮೂರು ದಿನಗಳ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿವೆ.ಎಲ್ಲಾ ೫ ತಾಂತ್ರಿಕ ಅವಧಿಗಳಲ್ಲಿ ಈ ಮೂರು ದಿನಗಳಲ್ಲಿ ನಡೆಸಲಾಗುತ್ತದೆ. ಭಾರತದ ೬ ಸಂಪನ್ಮೂಲ ವ್ಯಕ್ತಿಗಳು ಮತ್ತು ಜಗತ್ತಿನಾದ್ಯಂತ ೮ ಸಂಪನ್ಮೂಲ ವ್ಯಕ್ತಿಗಳು ತಮ್ಮಜ್ಞಾನವನ್ನು ಹಂಚಿಕೊಳ್ಳಲಿದ್ದು, ಸಮ್ಮೇಳನದ ವಿವಿಧ ವಿಷಯಗಳ ಕುರಿತು ೨೫ ಜನ ಪ್ರಬಂಧ ಮಾಡಿಸುತ್ತಿದ್ದಾರೆ.
*ಪ್ರತಿಭಟನೆ ವೇಳೆ ವಿದ್ಯಾರ್ಥಿ ದುರ್ಮರಣ; ವಿಶ್ವ ವಿದ್ಯಾಲಯ ಹೇಳಿದ್ದೇನು?*
https://pragati.taskdun.com/azim-premji-universitystudent-deathclarificationbangalore/
*ಸಾಧನಾ ಶಕ್ತಿಗೆ ಅವಕಾಶ ನೀಡಿದಾಗ ಸಾಮಾಜಿಕ ನ್ಯಾಯ ನೀಡಲು ಸಾಧ್ಯ: ಸಿಎಂ ಬೊಮ್ಮಾಯಿ*
https://pragati.taskdun.com/baba-saheb-ambedkarthe-problem-of-rupee-centenarycm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ