GIT add 2024-1
Kore@40
Beereshwara 33

ಕೆಎಲ್‍ಇ ಘಟಾನುಘಟಿ ರಾಜಕಾರಣಿಗಳನ್ನು ಬೆಳೆಸಿದೆ : ಡಾ.ಪ್ರಭಾಕರ ಕೋರೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತವನ್ನು ಜಗತ್ತು ನೋಡುವಂತೆ ಮಾಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರು. ಅವರ ಪ್ರಖರವಾದ ಯೋಜನೆಗಳಿಂದ ದೇಶದ ಆರ್ಥಿಕತೆ ಬದಲಾಗಿದೆ. ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಂತಹ ಪ್ರಧಾನಿ ಈ ದೇಶಕ್ಕೆ ಮತ್ತೊಮ್ಮೆ ಬೇಕು ಎಂದು  ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ

ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಜೆಎನ್‍ಎಂಸಿ ಆವರಣದ ಸಿಬ್ಬಂದಿವರ್ಗ ಹಾಗೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಸಿಬ್ಬಂದಿವರ್ಗದವರನ್ನು ಭೇಟಿಯಾಗಿ ಜಗದೀಶ ಶೆಟ್ಟರ ಅವರ ಪರವಾಗಿ ಮತಯಾಚಿಸಿದರು. ಬಳಿಕ ಮಾತನಾಡಿದ ಅವರು, ಕೆಎಲ್‍ಇ ನೂರು ವರ್ಷಗಳ ತನ್ನ ಚರಿತ್ರೆಯಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ಬೆಳೆಸಿದೆ. ಸಪ್ತರ್ಷಿಗಳು ಕೂಡ ಶಿಕ್ಷಕ ಮತಕ್ಷೇತ್ರವನ್ನು ಪ್ರತಿನಿಧಿಸಿ ಆರಿಸಿ ಬಂದಿದ್ದರು ಎಂದು ತಿಳಿಸಿದರು.‌

Emergency Service

ಮೋದಿಯವರ ಸಮರ್ಥ ನೇತೃತ್ವದಲ್ಲಿ ಜರುಗಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರದ ಚುಕ್ಕಾಣೆಯನ್ನು ಹಿಡಿದರೆ ದೇಶದ ಚಿತ್ರಣ ಬದಲಾಗುವುದರಲ್ಲಿ ಸಂದೇಹವಿಲ್ಲ.‌ ದೇಶ ಇಂದು ಜಗತ್ತಿನ ಪ್ರಬಲ ಆರ್ಥಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ನಮ್ಮ ವೈರಿ ರಾಷ್ಟ್ರಗಳು ಭಾರತವನ್ನು ಕಂಡು ಹೆದುರುತ್ತಿವೆ. ಮೊದಲಿನ ಪರಿಸ್ಥಿತಿ ಇಂದಿಲ್ಲ. ಭಾರತ ತಲೆ ಎತ್ತಿ ನಿಂತಿದೆ. ಕಳೆದ ಒಂದು ದಶಕದಲ್ಲಿ ವಿಶ್ವದ ಪ್ರಬಲ ರಾಷ್ಟ್ರವಾಗಿ ರೂಪುಗೊಂಡಿದೆ ಇದೆಲ್ಲ ಸಾಧ್ಯವಾದದ್ದು ನರೇಂದ್ರ ಮೋದಿಯವರಿಂದ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕೆಎಲ್‍ಇ ನಿರ್ದೇಶಕರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಕೆಎಲ್‍ಇ ಕಾರ್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2