Belagavi NewsBelgaum News

*ಕೆಎಲ್‌ಇ ನೂತನ ಶಾಲಾ ಕಟ್ಟಡ ಉದ್ಘಾಟನೆ*

ಮಯೂರ ಚಿತ್ರಮಂದಿರ ಅಂಕಲಿಯ 50ನೇ ವರ್ಷದ ಸುವರ್ಣ ಸಂಭ್ರಮ

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಕಲಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ರವಿವಾರ ದಿನಾಂಕ ಮೇ 18ರಂದು ಸಂಜೆ 5:30 ಗಂಟೆಗೆ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಜರುಗಲಿದೆ.

ಮುಖ್ಯ ಅತಿಥಿಗಳಾಗಿ ಖ್ಯಾತ ಕನ್ನಡ ಚಲನಚಿತ್ರ ನಟರಾದ ವಿ.ರವಿಚಂದ್ರನ್, ಡಾಲಿ ಧನಂಜಯ, ಮಂಡ್ಯ ರಮೇಶ, ನಟಿಯರಾದ ಅನು ಪ್ರಭಾಕರ, ಅಮೂಲ್ಯ, ಸಪ್ತಮಿ ಗೌಡ, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಆಗಮಿಸುತ್ತಿದ್ದಾರೆ. ಅಂದು ಸಂಜೆ 7:30 ರಿಂದ ಖ್ಯಾತ ಹಿನ್ನೆಲೆಗಾಯಕರು ಹಾಗೂ ತಂಡದವರಿಂದ ಸಂಗೀತ ಸಂಜೆಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿಯವರು ವಹಿಸಲಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಯೂರ ಚಿತ್ರಮಂದಿರ ಅಂಕಲಿಯ 50ನೇ ವರ್ಷದ ಸುವರ್ಣ ಸಂಭ್ರಮ
ರವಿವಾರ ದಿನಾಂಕ ಮೇ18 ರಂದು ಸಂಜೆ 5 ಗಂಟೆಗೆ ಅಂಕಲಿಯ ‘ಮಯೂರ’ ಚಿತ್ರಮಂದಿರ ಅಂಕಲಿಯ 50ನೇ ವರ್ಷದ ಸುವರ್ಣ ಸಂಭ್ರಮ ಸಮಾರಂಭವನ್ನು ಹಮ್ಮಿಕೊಂಡಿದೆ.


ಮುಖ್ಯ ಅತಿಥಿಗಳಾಗಿ ಖ್ಯಾತ ಕನ್ನಡ ಚಲನಚಿತ್ರ ನಟರಾದ ವಿ.ರವಿಚಂದ್ರನ್, ಡಾಲಿ ಧನಂಜಯ, ಮಂಡ್ಯ ರಮೇಶ, ನಟಿಯರಾದ ಅನು ಪ್ರಭಾಕರ, ಅಮೂಲ್ಯ, ಸಪ್ತಿಮಿ ಗೌಡ, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಆಗಮಿಸುತ್ತಿದ್ದಾರೆ. ಅಂದು ಸಂಜೆ 7:30 ರಿಂದ ಖ್ಯಾತ ಹಿನ್ನೆಲೆಗಾಯಕರು ಹಾಗೂ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button