Latest

ಕೋವಿಡ್ -19: ಇಂದು ಮುಖ್ಯಮಂತ್ರಿ ಬೊಮ್ಮಾಯಿ ಮೊದಲ ಮಹತ್ವದ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬೆಂಗಳೂರಿನಲ್ಲಿ ಕೊರೋನಾ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12.30ಕ್ಕೆ ಈ ಸಭೆ ನಡೆಯಲಿದ್ದು, ಮುಖ್ಯಮಂತ್ರಿಯಾದ ನಂತರ ಬೊಮ್ಮಾಯಿ ನಡೆಸುತ್ತಿರುವ ಮೊದಲ ಕೊರೋನಾ ಸಭೆ ಇದಾಗಿದೆ.

ಕೊರೋನಾ ನಿಯಂತ್ರಣ ನನ್ನ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಸಚಿವಸಂಪುಟ ರಚನೆಯ ನಂತರ ನೂತನ ಸಚಿವರಿಗೆ ಸಹ ಕೊರೋನಾ ನಿಯಂತ್ರಣಕ್ಕೆ ನಿಮಗೆ ವಹಿಸಿದ ಜಿಲ್ಲೆಗಳಿಗೆ ಧಾವಿಸುವಂತೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಶಾಲೆ, ಕಾಲೇಜು ಆರಂಭಿಸುವ ವಿಷಯ ನನೆಗುದಿಗೆ ಬಿದ್ದಿದೆ. 3ನೇ ಅಲೆಯ ಆತಂಕ ಹಾಗೆಯೇ ಇದೆ. 2ನೇ ಅಲೆ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕೊರೋನಾ ಕರ್ಫ್ಯೂ ಗೊಂದಲಕಾರಿಯಾಗಿದೆ.

Home add -Advt

ಈ ಎಲ್ಲ ವಿಷಯಗಳ ಕುರಿತು ಬೊಮ್ಮಾಯಿ ಚರ್ಚಿಸಿ ನಿರ್ಧರಿಸಬೇಕಿದೆ. ರಾಜ್ಯದಲ್ಲಿ ವೀಕ್ ಎಂಡ್ ಕರ್ಫ್ಯೂ ಅಥವಾ ನೈಟ್ ಕರ್ಫ್ಯೂ ವಿಧಿಸುವ ಕುರಿತು ಸಹ ಚರ್ಚಿಸುವ ಸಾಧ್ಯತೆ ಇದೆ. ಶಾಲೆ ಕಾಲೇಜಿ ಆರಂಭಿಸುವ ಕುರಿತಂತೆ ತಜ್ಞರ ಸಲಹೆ ಪಡೆಯುವ ನಿರೀಕ್ಷೆ ಇದೆ.

ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ ಇಂದು ಬೊಮ್ಮಾಯಿ ಭೇಟಿ

Related Articles

Back to top button