ಆಕಸ್ಮಿಕವಾಗಿ ಹೊಳೆಗೆ ಬಿದ್ದ ಮಗ; ರಕ್ಷಿಸಲು ಹೋದ ತಾಯಿಯೂ ನೀರುಪಾಲು

ಪ್ರಗತಿವಾಹಿನಿ ಸುದ್ದಿ; ಕುಂದಾಪುರ: ಮುಂಜಾನೆ ವಾಕಿಂಗ್ ಹೋಗಿದ್ದ ತಾಯಿ ಹಾಗೂ ಮಗ ಇಬ್ಬರು ಹೊಳೆಗೆ ಬಿದ್ದು ನೀರುಪಾಲಾಗಿರುವ ಘಟನೆ ಗಂಗೊಳ್ಳಿ ಸಮೀಪದ ಚುಂಗಿಗುಡ್ದೆಯಲ್ಲಿ ನಡೆದಿದೆ.

ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೊಸರಿಯೋ ಹಾಗೂ ಪುತ್ರ ಶಾನ್ (11) ಮೃತರು.

ಎಂದಿನಂತೆ ಇಂದೂ ಕೂಡ ಮನೆಯ ಬಳಿಯ ಹೊಳೆ ದಡಕ್ಕೆ ತಾಯಿ-ಮಗ ವಾಕಿಂಗ್ ಹೋಗಿದ್ದರು. ಈ ವೇಳೆ ಮಗ ಶಾನ್ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ತಾಯಿ ಕೂಡ ನೀರಿಗೆ ಹಾರಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ಸಿಬ್ಬಂದಿ. ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ.

Home add -Advt

Related Articles

Back to top button