Film & EntertainmentKannada NewsKarnataka NewsLatest

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಲೈಕಾಗೆ ಯುವರಾಜ ನಿಖಿಲ್ ಕುಮಾರ್ LIKE ಆಗಿದ್ದೇಕೆ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರೈಡರ್ ಚಿತ್ರದ ನಂತರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮತ್ತೆ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ.
ರಾಜಕೀಯದ ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ನಿಖಿಲ್ ನಿರ್ಧರಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿರುವ ನಿಖಿಲ್ ಗಾಗಿ ಕಾಲಿವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಎಂಟ್ರಿಯಾಗುತ್ತಿದೆ.
ನಿಖಿಲ್ ಜತೆ ಸಿನಿಮಾ ಮಾಡಲು ನಾಲ್ಕು ವರ್ಷ ಕಾದಿದ್ದ ಲೈಕಾ ಸಂಸ್ಥೆ ನಿಖಿಲ್ ಕುಮಾರ್ ಲುಕ್, ಸ್ಟೈಲ್ ಗಳಿಗೆ ಫಿದಾ ಆಗಿದೆ.

ಸೀತಾ- ರಾಮ ಕಲ್ಯಾಣ ಸಿನಿಮಾ ನೋಡಿ ಇಂಪ್ರೆಸ್ ಆಗಿದ್ದ ಲೈಕಾ ಸಂಸ್ಥೆ ಮಾಲೀಕ ಸುಭಾಷ್ ಕರಣ್ ಅವರು ನಿಖಿಲ್ ಗೆ ನೇರ ಆಫರ್ ನೀಡಿದ್ದು, ಇದಕ್ಕೆ ನಿಖಿಲ್ ಕೂಡ ಒಪ್ಪಿಗೆ ಸೂಚಿಸಿದ್ದರಿಂದ ಇದೀಗ ಲೈಕಾ ಸಂಸ್ಥೆಗೆ ನಿಖಿಲ್ ಜತೆ ಸಿನಿಮಾ ಮಾಡೋ ಅವಕಾಶ ಕೂಡಿ ಬಂದಿದೆ. ಇದೇ ತಿಂಗಳ 23 ರಂದು ಬೆಂಗಳೂರಿನಲ್ಲಿ ನಿಖಿಲ್ ಕುಮಾರ್ ಲೈಕಾ ನಿರ್ಮಾಣದ ಮೊದಲ ಕನ್ನಡ ಸಿನಿಮಾ ಮಹೂರ್ತ ನಡೆಯಲಿದೆ

ಇದೇ ಮೊದಲ ಬಾರಿಗೆ ಭಾರತದ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಕನ್ನಡ ನಾಯಕ ನಟನ ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಬಂಡವಾಳ ಹೂಡುತ್ತಿದೆ. ನಿಖಿಲ್ ಕೆರಿಯರ್ ನಲ್ಲೇ ಬಿಗ್ ಬಜೆಟ್ ಸಿನಿಮಾ ಇದಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button