Kannada NewsKarnataka NewsLatest

ವಿಕಲಚೇತನರಿಗಾಗಿ ವಿಶೇಷ ಶೌಚಾಲಯ, ನೂತನ ಸಭಾಭವನ ಕಟ್ಟಡ ಉದ್ಘಾಟಿಸಿದ ಲಕ್ಷ್ಮಿ ಹೆಬ್ಬಾಳಕರ್  

ಬೆಳಗಾವಿಯಲ್ಲಿ ಈ ಮಾದರಿಯ ಮೊದಲ ಕಟ್ಟಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ತಾಲೂಕ ಪಂಚಾಯತ್ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ನೂತನ ಕಟ್ಟಡವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಉದ್ಘಾಟಿಸಿದರು.
 ಬೆಳಗಾವಿ ತಾಲೂಕ ಪಂಚಾಯತಿ ಅನುದಾನದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಬೆಳಗಾವಿ ಶಹರಲ್ಲಿ ಇದು ಮೊದಲ ವಿಕಲಚೇತನ ಸ್ನೇಹಿ ಶೌಚಾಲಯ ಹಾಗೂ ಸಭಾಭವನ ಕಟ್ಟಡವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಹಲವು ವರ್ಷಗಳಿಂದ ವಿಕಲಚೇತನರು ಶೌಚಾಲಯ ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಸಭಾಭವನದ ಬೇಡಿಕೆ ಇಟ್ಟಿದ್ದರು. ದನ್ನು ಮನಗಂಡು,  ಅವರ ಬೇಡಿಕೆಯಂತೆ ಶೌಚಾಲಯ ಹಾಗೂ ಸಭಾಭವನ ಕಟ್ಟಡವನ್ನು ಉದ್ಘಾಟಿಸಿ ಅವರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ್ದೇನೆ ಎಂದು ಅವರು ತಿಳಿಸಿದರು.
ವಿಕಲಚೇತನರು ದೇವರ ಮಕ್ಕಳಿದ್ದಂತೆ, ಅವರನ್ನು ನಾವೆಲ್ಲರೂ ಬೆಳೆಸಿ, ಪೋಷಿಸುವ ಮೂಲಕ ಅವರ ಬೆಳವಣಿಗೆಗೆ ಸಹಕರಿಸೋಣ, ಅಧಿಕಾರಿಗಳು ವಿಕಲಚೇತನರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅಧಿಕಾರಿಯಾಗಿ ಮಾತ್ರವಲ್ಲದೆ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಮೂಲಕ ನೇರವಾಗಬೇಕಿದೆ. ಸರ್ಕಾರದಿಂದ ಯಾವುದೇ ಯೋಜನೆಗಳು ಬಂದರೆ ತ್ವರಿತಗತಿಯಲ್ಲಿ ವಿಕಲಚೇತನರಿಗೆ ತಿಳಿಸುವ ಕೆಲಸ ಮಾಡುತ್ತೇನೆ. ಸದಾ ನಿಮ್ಮ ಕಷ್ಟಗಳಲ್ಲಿ ಭಾಗಿಯಾಗಿ ವಿಶೇಷವಾದ ಕಾಳಜಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಮಾರುತಿ ಸನದಿ, ರೇಖಾ ಚೌಗಲಾ, ಶಮೀನಾ ನದಾಫ್, ಗೌರವ್ವ ಪಾಟೀಲ, ನೀಲೇಶ ಚಂದಗಡ್ಕರ್, ನೀತಾ ದೇಕೊಲ್ಕರ್, ಕಜಲ್ ಪಾಟೀಲ, ಪದ್ಮಶ್ರೀ ಬಸ್ತವಾಡ, ಕಜಲ್ ಮಹಗಾವಕರ್ ಚಂದ್ರಪ್ಪ ನಾಯ್ಕ, ಭೀಮಪ್ಪ ಮಳಗಲಿ, ಮಲ್ಲಪ್ಪ ಸಂಪಗಾಂವಿ, ಮಧುರಾ ದೇರಸೆ, ನಾಗರಾಜ ಯರಗುದ್ದಿ, ಜೈಜನತ್ ನಸಡಿ, ಕೆ ಎಮ್ ಪಾಟೀಲ, ಆನಂದ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button