Kannada NewsKarnataka NewsLatest

ಸರಕಾರದಿಂದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಕೊಡಿಸಲು ಯತ್ನ -ಲಕ್ಷ್ಮಿ ಹೆಬ್ಬಾಳಕರ್ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಆರೋಗ್ಯ ಮತ್ತು ಕುಟುಂಬವನ್ನೂ ಕಡೆಗಣಿಸಿ ಕೊರೋನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಗೌರವಧನ ಮತ್ತು ಆರೋಗ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
 ಬೆಳಗಾವಿ ತಾಲೂಕಿನ ಆಶಾ ಕಾರ್ಯಕರ್ತೆಯರು ಮಂಗಳವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.
ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ಎಂಬ ಮಹಾಮಾರಿ ವಿರುದ್ಧ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣವನ್ನೇ ಲೆಕ್ಕಿಸದೇ, ಆರೋಗ್ಯ ಮತ್ತು ಕುಟುಂಬವನ್ನು ತೊರೆದು ಹೋರಾಡುತಿದ್ದರೂ ಸರ್ಕಾರ ಮಾತ್ರ ಇವರನ್ನು ಲೆಕ್ಕಿಸದೇ ಇರುವುದು ಅವರ ನೋವಾಗಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಒದಗಿಸಿಕೊಡಬೇಕೆಂದು ತಮ್ಮ ಮನದಾಳದ ನೋವನ್ನು ಹೆಬ್ಬಾಳಕರ್ ಬಳಿ ತೋಡಿಕೊಂಡರು.
 
ಅವರ ನೋವಿಗೆ ಸ್ಪಂದಿಸಿದ ಹೆಬ್ಬಾಳಕರ್, ಸಾಮಾಜಿಕ ಮಹತ್ವದ ಆರೋಗ್ಯ ನಿಯಂತ್ರಣ ಕಾರ್ಯಕ್ರಮಗಳಲ್ಲಿ ತಮ್ಮ ಪ್ರಾಣ, ಆರೋಗ್ಯ, ಕುಟುಂಬವನ್ನು ತೊರೆದು ಮಹಾಮಾರಿ ರೋಗದ ವಿರುದ್ಧ ಹೋರಾಡುತ್ತಿರುವುದನ್ನು ನೋಡಿದರೆ ಆಶಾ ಕಾರ್ಯಕರ್ತೆಯರಿಗೆ ಬೆಲೆಯನ್ನು ಕಟ್ಟಲಾಗದಂತಹ ಉಡುಗೊರೆಯನ್ನು ನೀಡಿದರೂ ಕಡಿಮೆಯೇ.  ಅಂತಹ ಶ್ಲಾಘನೀಯವಾದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ನಿಮಗೆ ಸರ್ಕಾರದಿಂದ ಉತ್ತಮ ಗೌರವಧನ ಹಾಗೂ ಆರೋಗ್ಯ ರಕ್ಷಣಾ ಸಾಮಗ್ರಿಗಳು ಸಿಗಲು ನಾನು ಶ್ರಮಪಡುತ್ತೇನೆ. ಹಾಗೂ ನಿಮ್ಮ ಬೆಂಬಲಕ್ಕೆ ಸದಾ ಬೆಂಬಲವಾಗಿ ಇರುತ್ತೇನೆ ಎಂದು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button