Kannada NewsKarnataka NewsLatest

ಕ್ಷೇತ್ರಾದ್ಯಂತ ವ್ಯಾಕ್ಸಿನೇಶನ್, ಕೋವಿಡ್ ಟೆಸ್ಟಿಂಗ್ ವ್ಯವಸ್ಥೆ ಪರಿಶೀಲಿಸುತ್ತಿರುವ ಲಕ್ಷ್ಮಿ ಹೆಬ್ಬಾಳಕರ್ ​ 

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ ​- ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಕಡೆ ಓಡಾಡಿ ವ್ಯಾಕ್ಸಿನೇಶನ್ ಮತ್ತು ಕೋವಿಡ್ ಟೆಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ನಿಗಾ ವಹಿಸುತ್ತಿದ್ದಾರೆ.
 
​ಶುಕ್ರವಾರ ಕ್ಷೇತ್ರದ ಹಿಂಡಲಗಾ ಗ್ರಾಮದ ವ್ಯಾಕ್ಸಿನೇಷನ್‌ (ಕೋವಿಡ್ ಲಸಿಕೆ) ನೀಡುವ ಕೇಂದ್ರಕ್ಕೆ ಭೇಟಿ​ ನೀಡಿ ಲಸಿಕೆಗಳ ಪೂರೈಕೆಯ ಬಗ್ಗೆ ಪರಿಶೀಲಿಸಿ​ದರು.​ ​ಯಾರೂ ಹೆದರದೆ ಲಸಿಕೆಗಳನ್ನು ಪಡೆಯ​ಬೇಕು. ಅರ್ಹ ನಾಗರಿಕರೆಲ್ಲರು ಲಸಿಕೆಯ ಸದುಪಯೋಗ ಪಡೆದುಕೊಂಡು ಮಹಾಮಾರಿ ಕೊರೋನಾವನ್ನು ತಡೆಗಟ್ಟಬೇಕಿದೆ, ​ ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ ಲಸಿಕೆಗಳನ್ನು ​ತೆ​ಗೆದುಕೊಳ್ಳಬೇಕು​ ಎಂದು ಅವರು ವಿನಂತಿಸಿದರು​.
​ ಕ್ಷೇತ್ರದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯದ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಹಾಗೂ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳ ನೀಡುವಿಕೆ ಹಾಗೂ ಮನೆ ಮನೆಗಳಿಗೆ ತೆರಳಿ ಗಂಟಲು ದ್ರವಗಳ ಮಾದರಿಯನ್ನು ಸಂಗ್ರಹಿಸುವ ಕುರಿತು ಆಯಾ ಗ್ರಾಮಗಳ ಪ್ರಾ​ಥಮಿಕ ಆರೋಗ್ಯ ಕೇಂದ್ರಗಳ​ ವೈದ್ಯಾಧಿಕಾರಿಗಳಲ್ಲಿ ಕೋರಲಾಗಿದೆ. ಈ ಸಂಬಂಧ ತಾಲೂಕಾ ಆರೋಗ್ಯಾಧಿಕಾರಿಗಳ ಹಾಗೂ ತಹಸಿಲ್ದಾರ​ರ​ ಜೊತೆ ಮಾತನಾಡಿದ್ದೇನೆ​ ಎಂದು ಹೆಬ್ಬಾಳಕರ್ ತಿಳಿಸಿದರು​.
​ ಕೊರೋನಾ ​ಅ​ಟ್ಟಹಾಸದ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಕೋವಿಡ್ ನಿರ್ವಹಣೆಯಲ್ಲಿ ತೊಡಗಿರುವ ​ವೈದ್ಯಕೀಯ ಸಿಬ್ಬಂದಿಗೆ, ಮುಂಚೂಣಿ ಕಾರ್ಯಕರ್ತರಿಗೆ, ಆಶಾ ಕಾರ್ಯಕರ್ತರಿಗೆ​ ಶಾಸಕರು ಈ ಸಂದರ್ಭದಲ್ಲಿ​​ ಧನ್ಯವಾದಗಳನ್ನು ​ಸಲ್ಲಿಸಿದರು. 
​ 
ನಂತರ ಗಣೇಶಪುರದ ಕೋವಿಡ್ ಸ್ವ್ಯಾಬ್ (ಗಂಟಲು ದ್ರವಗಳ) ಸಂಗ್ರಹ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಕೊರೋನಾ ಲಕ್ಷಣಗಳು ಕಂಡು ಬಂದವರ ಜೊತೆ ಮಾತನಾಡಿ ಧೈರ್ಯವನ್ನು ತುಂಬಿದರು.
​ ಇನ್ನೂ ಹೆಚ್ಚಿನ ಗಂಟಲು ದ್ರವಗಳ ಮಾದರಿಯನ್ನು ಸಂಗ್ರಹಿಸಲು ಮನೆ ಮನೆಗಳಿಗೆ ತೆರಳ​ಬೇಕು​ ಎಂದು ಸಂಬಂಧಪಟ್ಟವರಿಗೆ ಸೂಚಿಸಿ​ದರು.
​ ​ತಾಲೂಕಾ ಆರೋಗ್ಯಾಧಿಕಾರಿ, ತಹಸಿಲ್ದಾರ್, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ​ರು​ ಹಾಗೂ ಸದಸ್ಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button