
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಈ ಸಂದರ್ಭದಲ್ಲಿ ಜನತೆಯ ಸೇವೆಗೊಸ್ಕರ 2 ಅಂಬುಲೆನ್ಸ್ ಗಳನ್ನು ಸಮರ್ಪಿಸಿದರು.

ದಿನನಿತ್ಯ ಕ್ಷೇತ್ರದ ಜನರು ಬೆಡ್ ಗಾಗಿ, ಇಂಜಕ್ಷನ್ ಗಾಗಿ, ಆಕ್ಸಿಜನ್ ಗಾಗಿ ಪೋನ್ ಮಾಡುತ್ತಿದ್ದಾರೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನನ್ನ ಕೈಯಿಂದ ಸಾಧ್ಯವಾದಷ್ಟು ನೆರವನ್ನು ನೀಡುತ್ತಿದ್ದೇನೆ. ಎಲ್ಲರೂ ಆದಷ್ಟು ಜಾಗೃತಿಯಿಂದ ಇರಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
ಸಿ.ಸಿ. ಪಾಟೀಲ, ರಾಮನಗೌಡ ಪಾಟೀಲ, ಶ್ರೀಕಾಂತ್ ಮಾದುಬರಬಣ್ಣವರ, ಬಸನಗೌಡ ಪಾಟೀಲ್, ಶಾಮ್ ಮುತ್ಗೇಕರ್, ಬಾಗನ್ನಾ ನರೋಟಿ, ಗಜಾನನ ಕಣಬರ್ಕರ, ಜೈವಂತ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ