ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಭಗವಾನ್ ಶ್ರೀ ಮಹಾವೀರ ಪ್ರಶಸ್ತಿ ಪ್ರದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮಹಾರಾಜ ಆಧ್ಯಾತ್ಮಿಕ ಅನುಸಂದಾನ ಫೌಂಡೇಶನ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಭಗವಾನ್ ಶ್ರೀ ಮಹಾವೀರ ಪ್ರಶಸ್ತಿ ನೀಡಲಾಗಿದೆ.
ಭಗವಾನ್ ಮಹಾವೀರರ 2550ನೇ ನಿರ್ವಾಣ ಮಹಾಮಹೋತ್ಸವದ ಸಂದರ್ಭದಲ್ಲಿ ಭಾನುವಾರ ಸಚಿವರಿಗೆ ಜೈನ ಮುನಿಗಳು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
“ನಾಡಿನ ಸರ್ವತೋಮುಖ ಪ್ರಗತಿಗಾಗಿ ಶುದ್ಧ ಮನಸ್ಸಿನಿಂದ ಮತ್ತು ನಿಸ್ವಾರ್ಥದಿಂದ ಜನಸೇವೆಯೊಂದಿಗೆ ತಮ್ಮ ಧಾರ್ಮಿಕ, ಜೈನ ಸಾಹಿತ್ಯ ಹಾಗೂ ಸಾಮಾಜಿಕ, ಆರೋಗ್ಯ, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಕಾರ್ಯ ಮತ್ತು ಸೇವೆ ಎಂದಿಗೂ ಮರೆಯಲಾರದಂತದ್ದು. ಜೈನ ಧರ್ಮದ ಆಚಾರ, ವಿಚಾರಗಳನ್ನು ಅಳವಡಿಸಿಕೊಂಡು, ನಿತ್ಯ ಸತ್ಯವಾಗಿರುವ ಅಂಹಿಸೆ, ಪ್ರೇಮ, ವಾತ್ಸಲ್ಯದ ವಿಚಾರಗಳನ್ನು ಅನುದಿನ ಜನಮನಕ್ಕೆ ತಲುಪುವ ದಿಸೆಯಲ್ಲಿ ಪ್ರಚಾರದಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ತಮಗೆ ಶ್ರೀ 1008 ಭಗಾವಾನ್ ಮಹಾವೀರ ತೀರ್ಥಂಕರರ 2550ನೇ ನಿರ್ವಾಣ ಮಹಾಮಹೋತ್ಸವದ ನಿಮಿತ್ಯ ಬಾಲಾಚಾರ್ಯ ಪರಮಪೂಜ್ಯ ಶ್ರೀ 108 ಸಿದ್ಧಸೇನ ಮುನಿ ಮಹಾರಾಜ ಪಾವನ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಅತೀವ ಹೆಮ್ಮೆ ಅನಿಸುತ್ತಿದೆ” ಎಂದು ಪ್ರಶಸ್ತಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಾಲಾಚಾರ್ಯ ಶ್ರೀ 108 ಸಿದ್ಧಸೇನ ಮಹಾರಾಜರು, ಮುನಿಶ್ರೀ 108 ಪುಣ್ಯ ಸಾಗರ ಮಹಾರಾಜರು, ಶ್ರೀ 108 ಪುರಾಣ ಸಾಗರ ಮಹಾರಾಜರು, ಮುನಿಶ್ರೀ 108 ಪ್ರಸಂಗ ಸಾಗರ ಮಹಾರಾಜರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸುಕುಮಾರ ಹುಡೇದ, ಶಾಂತು ಬೆಲ್ಲದ, ಅಣ್ಣಪ್ಪ ಹುಡೇದ, ಭರತೇಶ ಬೆಲ್ಲದ, ಮಹಾವೀರ ಪಾಟೀಲ, ರಾಹುಲ ಘಂಟಿ, ಚಾರುಕೀರ್ತಿ ಸೈಬನ್ನವರ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ