Latest

ದ್ವಿತೀಯ ಪಿಯುಸಿ ವೇಳಾ ಪಟ್ಟಿ ಪ್ರಕಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪಿಯು ಪರೀಕ್ಷೆಗಳು ಮೇ 24ರಿಂದ ಜೂ. 16ರವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ವೇಳಾಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಒಂದುವಾರ ಸಮಯ ನಿಗದಿಪಡಿಸಲಾಗಿತ್ತು. ರಾಜ್ಯದ ವಿವಿಧೆಡೆಯ ಹಲವಾರು ಪೋಷಕರು ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಸಲ್ಲಿಸಿದ ಮನವಿಗಳು ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೆಯೇ ನೀಟ್, ಜೆಇಇಗಳಂತಹ ಮುಂದಿನ ತರಗತಿಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯು ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದರು.

24-05-2021- ಇತಿಹಾಸ
25-05-2021-ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
26-05-2021 – ಭೂಗೋಳ ಶಾಸ್ತ್ರ
27-05-2021- ಮನಃಶಾಸ್ತ್ರ/ ಮೂಲಗಣಿತ
28-05-2021 – ತರ್ಕಶಾಸ್ತ್ರ
29-05-2021 – ಹಿಂದಿ
31-05-2021 – ಇಂಗ್ಲಿಷ್,
01-06-2021 – ಮಾಹಿತಿ ತಂತ್ರಜ್ಞಾನ/ಹೆಲ್ತ್‌ಕೇರ್/ವೆಲ್‍ನೆಸ್‍ಬ್ಯೂಟಿ,
02-06-2021 – ರಾಜ್ಯಶಾಸ್ತ್ರ/ಗಣಕ ವಿಜ್ಞಾನ,
03-06-2021 – ಜೀವವಿಜ್ಞಾನ/ಎಲೆಕ್ಟ್ರಾನಿಕ್ಸ್
04-06-2021 – ಅರ್ಥಶಾಸ್ತ್ರ
05-06-2021 – ಗೃಹ ವಿಜ್ಞಾನ
07-06-2021 – ವ್ಯವಹಾರ ಅಧ್ಯಯನ/ ಭೌತವಿಜ್ಞಾನ
08-06-2021 – ಐಚ್ಛಿಕ ಕನ್ನಡ
09-06-2021 – ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೆಬಿಕ್/ಫ್ರೆಂಚ್,
10-06-2021 – ಸಮಾಜ ಶಾಸ್ತ್ರ/ ರಸಾಯನವಿಜ್ಞಾನ
11-06-2021 – ಉರ್ದು/ ಸಂಸ್ಕೃತ
12-06-2021 – ಸಂಖ್ಯಾಶಾಸ್ತ್ರ
14-06-2021 – ಲೆಕ್ಕಶಾಸ್ತ್ರ/ ಗಣಿತ/ಶಿಕ್ಷಣ
15-06-2021 – ಭೂಗರ್ಭಶಾಸ್ತ್ರ
16-06-2021 – ಕನ್ನಡ ಪರೀಕ್ಷೆ

ಎಸ್ಸೆಸ್ಸೆಲ್ಸಿ ವೇಳಾಪಟ್ಟಿ ಶೀಘ್ರ: ಪ್ರಸ್ತುತ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸ್ವೀಕರಿಸಲು ಅವಧಿ ಮುಗಿದ ತಕ್ಷಣವೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Home add -Advt

Related Articles

Back to top button