Belagavi NewsBelgaum NewsKannada NewsKarnataka NewsLatest

*ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿತ ಪ್ರಕರಣ: ಕಾಕತಿ ಸಿಪಿಐ ಅಮಾನತು*

ಪ್ರಗತಿವಾಹಿನಿ ಸುದ್ದಿ;

Home add -Advt

ಬೆಳಗಾವಿ: ವಂಟಮೂರಿಯಲ್ಲಿ ನಡೆದಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಕತಿ ಠಾಣೆ ಸಿಪಿಐ ಅವರನ್ನು ಕರ್ತವ್ಯ ಲೋಪ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ.

ಸಿಪಿಐ ವಿಜಯ್ ಸಿನ್ನೂರ್ ಅಮಾನತುಗೊಂಡ ಕಾಕತಿ ಠಾಣೆ ಪೊಲೀಸ್. ಬೆಳಗಾವಿ ಜಿಲ್ಲೆಯ ಮಂಟಮೂರಿಯಲ್ಲಿ ಮಹಿಳೆಯನ್ನು ವಿಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ ಎಂಬ ಸುದ್ದಿ ಘಟನೆ ನಡೆದ ತಡರಾತ್ರಿ 3 ಗಂಟೆಗೆ ಸಿಪಿಐ ವಿಜಯಗ್ ಬಂದಿತ್ತು. ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೂ ಘಟನಾ ಸ್ಥಳಕ್ಕೆ ತೆರಳದೇ ಬೆಳಿಗ್ಗೆ 7 ಗಂಟೆಗೆ ಘಟನಾ ಸ್ಥಳಕ್ಕೆ ಸಿಪಿಐ ಹೋಗಿದ್ದರು.

ತಡಮಾಡಿ ಘಟನಾ ಸ್ಥಳಕ್ಕೆ ತೆರಳಿದ್ದ ಬಗ್ಗೆ ಎಸಿಪಿ ಕಮಿಷನರ್ ಗೆ ವರದಿ ನೀಡಿದ್ದಾರೆ. ವರದಿ ಆದರಿಸಿ ಕರ್ತವ್ಯಲೋಪ, ನಿರ್ಲಕ್ಷತನ ಆರೋಪದಲ್ಲಿ ಸಿಪಿಐ ವಿಜಯ್ ಸಿನ್ನೂರ್ ಅವರನ್ನು ಅಮಾನತುಗೊಳಿಸಿ ಕಮಿಷನರ್ ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ.

Related Articles

Back to top button