ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ 7 ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗಾಗಿ ದೇವಸ್ಥಾನಗಳ ಟ್ರಸ್ಟ್ ಕಮೀಟಿಯವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಚೆಕ್ ವಿತರಿಸಿದರು.
ಹಂಗರಗಾ, ಮಂಡೋಳಿ, ಕೊಂಡಸಕೊಪ್ಪ, ಬೆನಕನಹಳ್ಳಿ, ಉಚಗಾಂವ, ಸಂತಿಬಸ್ತವಾಡ, ಸೋನೋಲಿ ಈ ಎಲ್ಲ ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿಗಾಗಿ ಒಟ್ಟು 1.09 ಕೋಟಿ ರೂ,ಗಳ ಚೆಕ್ ಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಆಯಾ ಗ್ರಾಮಗಳ ಮುಖಂಡರು, ಯುವರಾಜ ಕದಂ, ದೇವಸ್ಥಾನಗಳ ಟ್ರಸ್ಟ್ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ