Latest

ಸಿದ್ದರಾಮಯ್ಯ ನೋಟವೂ.. ಲಾವಣ್ಯ ಮೊಬೈಲ್ ಗೆ ಮೆಸೇಜ್ ಮಹಾಪ್ರವಾಹವೂ..

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪ್ರಿಯಾಂಕಾ ಗಾಂಧಿ ಅವರ ಉಪಸ್ಥಿತಿಯಲ್ಲಿ ನಡೆದ ‘ನಾ ನಾಯಕಿ’ ಕಾರ್ಯಕ್ರಮದ ವೇದಿಕೆಯಲ್ಲಿ ನಿರೂಪಕಿಯನ್ನು ಪ್ರತಿಪಕ್ಷ ನಾಯಕಿ ಸಿದ್ದರಾಮಯ್ಯ ಅವರು “ಇದ್ಯಾರೋ..” ಎಂಬಂತೆ ನಿರೂಪಕಿಯನ್ನು ದಿಟ್ಟಿಸಿದ ವೈರಲ್ ವಿಡಿಯೊಗೆ ಪ್ರತಿಕ್ರಿಯಿಸಿದ ಲಾವಣ್ಯ ಬಲ್ಲಾಳ್ “ಇದೊಂದು ಪಾಸಿಟಿವ್ ಟ್ರೋಲ್.. ಕಾರ್ಯಕ್ರಮದ ಕೆಲ ಕ್ಷಣಗಳಲ್ಲೇ ತಮ್ಮ ಮೊಬೈಲ್ ಗೆ ಮೆಸೇಜ್ ಗಳ ಮಹಾಪ್ರವಾಹ  ಹರಿದುಬರುತ್ತಿದೆ” ಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು, “ವಿಡಿಯೊ ಇಷ್ಟೊಂದು ವೈರಲ್ ಆಗುತ್ತೆ ಎನಿಸಿರಲಿಲ್ಲ. ಸ್ಟೇಜಲ್ಲೂ ತುಂಬಾ ನಕ್ಕುಬಿಟ್ಟೆ.. ತುಂಬಾ ಕ್ಯೂಟ್ ವಿಡಿಯೊ..” ಎಂದು ಹೇಳಿದ್ದಾರೆ.

“ನನಗೇನೂ ಅನಿಸಲಿಲ್ಲ, ಯಾರೋ ವಿಡಿಯೊ ಕಳಿಸಿದಾಗ ನೋಡಿ ತುಂಬಾ ನಕ್ಕುಬಿಟ್ಟೆ” ಎಂದ ಅವರು, “ಸಿದ್ದರಾಮಯ್ಯ ಅವರು ನಮ್ಮನ್ನು ಯಾವಾಗಲೂ ಕಚೇರಿಯಲ್ಲಿ ಭೇಟಿಯಾಗುತ್ತಾರೆ. ಅವರು ನನಗೆ ತಂದೆಯಿದ್ದಂತೆ. ಅದನ್ನು ಪಾಸಿಟಿವ್ ಆಗಿ ಎಲ್ಲರೂ ನೋಡುತ್ತಿರುವುದು ಖುಷಿ ಎನಿಸಿದೆ. ಅವರು ಬರುತ್ತಿದ್ದಾಗಲೂ ನನ್ನಷ್ಟಕ್ಕೆ ನಾನು ನಿರೂಪಣೆ ಮಾಡುತ್ತಲೇ ಉಳಿದೆ. ಅವರಿಗೆ ಯಾರು ಆ್ಯಂಕರಿಂಗ್ ಮಾಡುತ್ತಿದ್ದಾರೆಂಬುದು ತಿಳಿಯಲಿಲ್ಲ. ಓ.. ಈಕೆನಾ.. ಎನ್ನುವ ರೀತಿಯಲ್ಲಿ ಆ ಮೇಲೆ ಅವರು ಕೈ ಮಾಡಿದ್ದನ್ನು ವಿಡಿಯೊದಲ್ಲಿ ಕಾಣಬಹುದು” ಎಂದರು.

“ಸಿದ್ದರಾಮಯ್ಯ ಅವರ ಕ್ಯಾರೆಕ್ಟರೇ ಹಾಗೆ. ಅವರೆಂದರೆ ವಿಶೇಷ. ಅವರು ಏನು ಮಾಡಿದರೂ ಟ್ರೆಂಡ್ ಆಗುತ್ತದೆ,” ಎಂದ ಲಾವಣ್ಯ, “ಅಪ್ಪ- ಅಮ್ಮರಾತ್ರಿ ಫೋನ್ ಮಾಡಿ ನಿರೂಪಣೆಯಲ್ಲಿ ಏನಾದರೂ ತಪ್ಪು ಮಾಡಿದ್ಯಾ? ಎಂದು ಕೇಳಿದರು. ವಿಷಯ ತಿಳಿಸಿದಾಗ ಅವರೂ ಮಾಮೂಲಾಗಿ ಸ್ವೀಕರಿಸಿ ನಕ್ಕರು,” ಎಂದು ಖುಷಿಯಲ್ಲೇ ನುಡಿದರು.

ಪಂಜಾಬ್ ಸೇರಿದಂತೆ ನಾನಾ ಕಡೆಗಳಿಂದ ತಮಗೆ ಫೋನ್ ಕರೆಗಳು ಬರುತ್ತಲೇ ಇರುವುದಾಗಿ ತಿಳಿಸಿದ ಲಾವಣ್ಯ ಬಲ್ಲಾಳ್, “ಸಿದ್ದರಾಮಯ್ಯ ಅವರ ಟ್ರೋಲ್ ವಿಡಿಯೊದಿಂದಾಗಿ ಮಲ್ಲಿಗೆ ಜೊತೆ ದಾರವೂ ಸ್ವರ್ಗಕ್ಕೆ ಹೋದಂತೆ ನನ್ನನ್ನೂ ಜನ ಗುರುತಿಸುವಂತಾಯಿತು” ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನೆಗೆಟಿವ್ ಟ್ರೋಲ್ ಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಿದ ಅವರು, “ಅವರವರ ಮಾನಸಿಕತೆ..” ಎಂದಷ್ಟೇ ಹೇಳಿದರಲ್ಲದೆ, ವಿಷಯ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದಕ್ಕೆ ತಂತ್ರಜ್ಞಾನವನ್ನು ಹೊಗಳಿದರು.

*ನಾರಾಯಣಪುರ ಎಡದಂಡೆ ಕಾಲುವೆಯ ಆಧುನೀಕರಣ; ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಮೈಲಿಗಲ್ಲು ಯೋಜನೆ*

https://pragati.taskdun.com/narayanapura-edadande-kaluvepm-modicm-basavaraj-bommai/

ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದುಂಡಾವರ್ತಿ

https://pragati.taskdun.com/bjp-mp-tejaswi-surya-opened-the-emergency-exit-door-of-the-plane/

ಕಾರು ಕಳುವು ಮಾಡಿ ಮಾರುತ್ತಿದ್ದ ಆರೋಪಿಗಳ ಬಂಧನ; MSRTC ಮಾಜಿ ಗುಮಾಸ್ತ ಗುಪ್ತ ದಂಧೆಯ ಕಿಂಗ್ ಪಿನ್ !

https://pragati.taskdun.com/arrest-of-accused-who-stole-and-sold-cars-msrtc-ex-clerk-is-the-kingpin-of-the-undercover-racket/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button