Kannada NewsLatestNational

*ಲಿಫ್ಟ್ ಕುಸಿದು ಬಿದ್ದು ದುರಂತ; 6 ಕಾರ್ಮಿಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮುಂಬೈ: ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ 6 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಭಾಲ್ಕಮ್ ಪ್ರದೇಶದಲ್ಲಿ ನಡೆದಿದೆ.

40 ಅಡಿ ಅಂತಸ್ತಿನ ನಿರ್ಮಾಣ ಹಂತದ ಲಿಫ್ಟ್ ಕುಸಿದು ಬಿದ್ದ ಪರುಣಾಮ ಈ ದುರಂತ ಸಂಭವಿಸಿದೆ. ಓರ್ವ ಗಾಯಗೊಂಡಿದ್ದಾನೆ

ಲಿಫ್ಟ್ ಕೇಬಲ್ ನಲ್ಲಿ ಒಂದು ಸ್ನ್ಯಾಪ್ ಆಗಿದ್ದು ಏಕಾಏಕಿ ಕುಸಿದು ಬಿದ್ದಿದೆ. , ಪ್ರಾದೇಶಿಕ ವಿಪತ್ತು ನಿರ್ವಹಣಾ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೆಲಮಾಳಿಗೆಯ ಪಾರ್ಕಿಂಗ್ ನಿಂದ ಕಾರ್ಮಿಕರನ್ನು ಹೊರತೆಗೆದಿದ್ದಾರೆ.

ಮೃತ ಕಾರ್ಮಿಕರನ್ನು ಮಹೇಂದ್ರ ಚೌಪಾಲ್, ರೂಪೇಶ್ ಕುಮಾರ್ ದಾಸ್, ಹರುಣ್ ಶೇಖ್, ಮಿಥ್ಲೇಶ್, ಕರಿದಾಸ್ ಎಂದು ಗುರುತಿಸಲಾಗಿದೆ. ಓರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button