ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಗುರುವಾರದ ಮಧ್ಯಾಹ್ನ ೧ ಗಂಟೆಯಿಂದ ಸೋಮವಾರದ ವರೆಗೆ ಶರತ್ತು ಬದ್ದ ಲಾಕಡೌನ ಜಾರಿಯಲ್ಲಿರುತ್ತದೆ ಎಂದು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ.
ಮಂಗಳವಾರ ತಾಲೂಕಿನಲ್ಲಿ ಐದು ಕೊರೋನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ತಹಶೀಲ್ದಾರ್ ಕಛೇರಿ ಆವರಣದ ಹೊರಗಡೆಯೇ ಟಾಸ್ಕಪೋರ್ಸ ಕಮೀಟಿ ಸಭೆ ನಡೆಸಿ ಅವರು ಮಾತನಾಡಿದರು.
ಗುರುವಾರ ಬೆಳ್ಳಗೆ ೫ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ತಾಲೂಕಿನಾದ್ಯಂತ ಕಟ್ಟು ನಿಟ್ಟಿನ ಶರತ್ತುಬದ್ದ ಲಾಕಡೌನ ಜಾರಿಯಲ್ಲಿರಲಿದ್ದು ಸಾರ್ವಜನಿಕರು ಸಹಕರಿಸಬೇಕು. ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಗೋಕಾಕ ನಗರಕ್ಕೆ ಬರುವ ಗ್ರಾಮಸ್ಥರನ್ನು ನಗರಕ್ಕೆ ಬರದಂತೆ ನೋಡಲ್ ಅಧಿಕಾರಿಗಳು ಕಡಿವಾಣ ಹಾಕಿ ಆಯಾ ಗ್ರಾಮಗಳಲ್ಲಿ ಡಂಗುರ ಸಾರಬೇಕು . ೧೦ ವರ್ಷದ ಕೆಳಗಿನ ಮಕ್ಕಳು ಮತ್ತು ೬೦ ವರ್ಷ ಮೇಲ್ಪಟ್ಟ ನಾಗರಿಕರು ಕಡ್ಡಾಯವಾಗಿ ಮನೆಯಲ್ಲಿ ಇದ್ದು ಅವಶ್ಯಕತೆ ಅನುಗುಣವಾಗಿ ಮಾತ್ರ ಮನೆಯಿಂದ ಹೊರ ಬರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಶರತ್ತುಬದ್ದ ಲಾಕಡೌನ್ ಸಂದರ್ಭದಲ್ಲಿ ಹೋಟೆಲ್ , ಕಿರಾಣಿ ಅಂಗಡಿ , ಸಂತೆ ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಲಾಗುವುದು. ಅಗತ್ಯ ವಸ್ತುಗಳಾದ ಹಾಲು , ತರಕಾರಿ , ಹಣ್ಣು , ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು ಯತಾ ಪ್ರಕಾರ ಕಾರ್ಯನಿರ್ವಹಿಸಲಿವೆ ಎಂದು ತಹಶೀಲ್ದಾರ ತಿಳಿಸಿದ್ದಾರೆ.
ಕೊಣ್ಣೂರ ಪಟ್ಟಣದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ದೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ೧೩ ಜನರಿಗೆ ಮತ್ತು ಬುಧವಾರ ಸೋಂಕು ಧೃಡಪಟ್ಟವರ ಪ್ರಾಥಮಿಕ ಸಂರ್ಕಕ್ಕೆ ಬಂದ ೩೨ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದ ೩೫ ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು , ನಾಳೆಯಿಂದ ೪೮ ಘಂಟೆಗಳ ಕಾಲ ತಹಶೀಲ್ದಾರ್ ಕಛೇರಿ ಮತ್ತು ಕೊಣ್ಣೂರ ಪಟ್ಟಣದ ಒಂದು ಖಾಸಗಿ ಆಸ್ಪತ್ರೆ ಮತ್ತು ನಗರದ ಸ್ಕ್ಯಾನಿಂಗ್ ಸೆಂಟರ್ ಮತ್ತು ಲ್ಯಾಬನ್ನು ಸೀಲಡೌನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮದುವೆ ನಡೆಯುವ ಸ್ಥಳಗಳು ಸೋಂಕು ಹರಡುವಿಕೆ ಕೇಂದ್ರಗಳಾಗಿ ಮಾರ್ಪಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ೫೦ ಕ್ಕೂ ಹೆಚ್ಚು ಜನರು ಸೇರದಂತೆ ನೋಡಲ್ ಅಧಿಕಾರಿಗಳು ಕಟ್ಟನಿಟ್ಟಿನ ಕ್ರಮ ಜರಗಿಸಬೇಕು ಮತ್ತು ಮರಣ ಹೊಂದಿದ ವ್ಯಕ್ತಿಗಳ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೆವಲ ೨೦ ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ನಿರ್ಧಾಕ್ಷಣೀಯವಾಗಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ ಹೋಳೆಪ್ಪಗೋಳ ತಿಳಿಸಿದ್ದಾರೆ.
ಸೀಲ್ ಡೌನ್
ಗೋಕಾಕ: ನಗರದ ತಹಶೀಲ್ದಾರ ಕಚೇರಿಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಖಚಿತವಾದ ಹಿನ್ನಲೆ ಕಚೇರಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ.
ಗೋಕಾಕ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಹಿಸುತ್ತಿದ್ದ ಸಿಬ್ಬಂದಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಗೋಕಾಕ ತಹಸೀಲ್ದಾರ ಆಫೀಸ್ ಸಿಬ್ಬಂದಿ ಸೇರಿ ಗುಜನಾಳ, ಖನಗಾಂವ ಮತ್ತು ಶೀಂದಿಕುರಬೇಟ ಸೇರಿದಂತೆ ೫ ಜನಕ್ಕೆ ಕೊರೋನಾ ಪಾಸೀಟಿವ ಬಮದಿರುವುದು ಇಂದು ದೃಢಪಟ್ಟಿದೆ.
ನಿನ್ನೆಯಷ್ಟೆ ತಾಲೂಕಿನ ಕೊಣ್ಣೂರು ಪಟ್ಟಣದ ಮಹಿಳೆಯೋರ್ವಳು ಮೃತಪಟ್ಟಿದ್ದರು. ಸೋಂಕಿತರು ಇರುವ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ