Latest

ಲಾಕ್ ಡೌನ್, ಕರ್ಫ್ಯೂ ವೇಳೆ ಕಾಂಡೋಮ್ ಬಳಕೆ ಮರೆತ ಜನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಒಂದೆಡೆ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದರೆ, ಇನ್ನೊಂದೆಡೆ ಕೃತಕ ಗರ್ಭಧಾರಣೆ ಮೊರೆ ಹೋಗುವವರ ಸಂಖ್ಯೆ ಕೂಡ ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ.

ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಲಾಕ್ ಡೌನ್, ಕರ್ಫ್ಯೂ ಸೇರಿದಂತೆ ಅನೇಕ ಕಾರಣಗಳಿಂದ ಮನೆಯಲ್ಲಿಯೆ ಕಾಲಕಳೆಯುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಸಹಜ ಗರ್ಭಧರಿಸುವವರ ಸಂಖ್ಯೆ ಅಧಿಕವಾಗಿದೆ. ಇದರಿಂದ ಕೃತಕ ಗಭಧಾರಣೆ ಮೊರೆಹೋಗುವವರು ಕಡೆಯಾಗಿದ್ದಾರೆ.

ಇನ್ನು ಕಳೆದ ಎರಡು ವರ್ಷಗಳಿಂದ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ಬಳಕೆ ಕಡಿಮೆಯಾಗಿದೆ. ಹೋಟೆಲ್, ಅನಗತ್ಯ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳ ಸ್ಥಗಿತ, ಕಾಂಡೋಮ್ ಬಳಕೆ ಕುರಿತು ಸರ್ಕಾರದ ಜಾಗೃತಿ ಅಭಿಯಾನ ರದ್ದು ಸೇರಿದಂತೆ ಹಲವು ಕಾರಣಗಳಿಂದ ಕಾಂಡೋಮ್ ಬಳಕೆ ಇಳಿಕೆಯಾಗಿದೆ.

ಕಾಂಡೋಮ್ ತಯಾರಿಕಾ ದೈತ್ಯ ಕಂಪನಿ ಮಲೇಷ್ಯಾದ ಕರೆಕ್ಸ್ ಉತ್ಪನ್ನಗಳ ಬೇಡಿಕೆ ಎರಡು ವರ್ಷಗಳಲ್ಲಿ ಶೇ.40ರಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.

ಪತ್ನಿ ವಿನಿಮಯ ದಂಧೆ; ಪತಿ ಸೇರಿ 6 ಜನರ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button