Belagavi NewsBelgaum NewsKannada NewsKarnataka News

*ವಿರೋಧದ ನಡುವೆ ಪ್ರೇಮ ವಿವಾಹ: ರಕ್ಷಣೆ ಕೋರಿ ಬೆಳಗಾವಿ ಎಸ್‌ಪಿ ಕಚೇರಿಗೆ ಬಂದ ಜೋಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹವಾದ ಜೋಡಿ ನಮಗೆ ರಕ್ಷಣೆಬೇಕೆಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೇಟ್ಟಿಲೆರಿರುವ ಘಟನೆ ನಡೆದಿದೆ.

ಬುಧವಾರ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ನಿವಾಸಿಗಳಾದ ಶಿವಪ್ಪ ಹಾಗೂ ವಿಮಲಾ ಭೋವಿ ಇವರು ಕಳೆದ ಎರಡು ವರ್ಷಗಳಿಂದ ಪ್ರಿತಿಸಿ ಪೊಷಕರಿಗೆ ಗೊತ್ತಿಲ್ಲದೆ ದೇವಸ್ಥಾನದಲ್ಲಿ ಮದುಯಾಗಿದ್ದಾರೆ. ಆದರೆ ಈ ಜೋಡಿಗೆ ಈಗ ಜೀವಭಯ ಎದುರಾಗಿದೆ.

Home add -Advt

ಶಿವಪ್ಪ ಮೂಕಗೋಳ ಮತ್ತು ವಿಮಲಾ ಭೋವಿ ವಿವಾಹದ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ವಿಮಲಾಳನ್ನು ಆಕೆಯ ಪೋಷಕರು ಮನೆಯಲ್ಲಿ ಗೃಹಬಂಧನದಲ್ಲಿ ಇಟ್ಟಿದ್ದರು. ಇಂದು ಪೋಷಕರ ಕಣ್ಣು ತಪ್ಪಿಸಿ ಎಸ್‌ಪಿ ಕಚೇರಿಗೆ ಆಗಮಿಸಿದ ಜೋಡಿ, ತಮಗೆ ರಕ್ಷಣೆ ನೀಡುವಂತೆ ಶಿವಪ್ಪ ಮೂಕಗೋಳ ಮನವಿ ಮಾಡಿದ್ದಾರೆ.

ವಿಮಲಾ ಬಿ.ಎ. ಮೊದಲ ವರ್ಷದಲ್ಲಿ ಓದುತ್ತಿದ್ದಾಳೆ. ಶಿವಪ್ಪ ಗೌಂಡಿ ಕೆಲಸ ಮಾಡುತ್ತಿದ್ದಾನೆ.‌ ಶಿವಪ್ಪನ್ನವರ ಮನೆಯವರು ಎಂದರೆ ಮೊದಲಿನಿಂದಲು ವಿಮಾಲ ಕುಟುಬಂಸ್ಥರಿಗೆ ಆಗಿ ಬರುವುದಿಲ್ಲ.‌ ಈ ಮದುವೆಗೆ ಶಿವಪ್ಪನ ಮನೆಯಲ್ಲಿ ಒಪ್ಪಿಗೆ ಇದೆ. ಆದರೆ ವಿಮಲಾ ಮನೆಯವರು ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು, ಹೇಗೋ ತಪ್ಪಿಸಿಕೊಂಡು ಇಂದು ಎಸ್ ಪಿ ಕಚೇರಿಗೆ ಆಗಮಿಸಿ‌ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. 

ಈ ಇಬ್ಬರು ಜೋಡಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಮದುವೆ ಆಗಿರುವ ಈ ನವಜೋಡಿಯ  ಪೊಲೀಸರು ರಕ್ಷಣೆ ಸಿಗಬೇಕಿದೆ.

Related Articles

Back to top button