Kannada NewsKarnataka NewsLatest

*ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಹೋಮ್ ಗಾರ್ಡ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾನ್ಸ್ ಟೇಬಲ್ ಹಾಗೂ ಹೋಮ್ ಗಾರ್ಡ್ ಗಳಿಬ್ಬರ ಪ್ರೀತಿ ದುರಂತ ಅಂತ್ಯಕಂಡಿದೆ. ಪ್ರಿಯತಮೆ ಹೋಮ್ ಗಾರ್ಡ್, ಪ್ರಿಯಕರ ಕಾನ್ಸ್ ಟೇಬಲ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪುಟ್ಟೆನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Home add -Advt

ಕಾನ್ಸ್ ಟೇಬಲ್ ಸಂಜಯ್ ಮೃತ ದುರ್ದೈವಿ. ಕಾನ್ಸ್ ಟೇಬಲ್ ಸಂಜಯ್ ಹಾಗೂ ಹೋಮ್ ಗಾರ್ಡ್ ರಾಣಿ ಇಬ್ಬರೂ ಬಸವನಗುಡಿ ಠಾಣೆಯಲ್ಲಿ ಕೆಲಸ ಮಡುತ್ತಿದ್ದರು. ಈ ವೇಳೆ ಇಬ್ಬರೂ ಪ್ರೀತಿಸಿದ್ದರು. ಮದುವೆಯಾಗಿದ್ದರೂ ಕೂಡ ರಾಣಿ ಕಾನ್ಸ್ ಟೇಬಲ್ ಸಂಜಯ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ ಇತ್ತೀಚೆಗೆ ಸಂಜಯ್ ನನ್ನು ಅವೈಡ್ ಮಾಡಿದ್ದಳು. ಇದರಿಂದ ಕಾನ್ಸ್ ಟೇಬಲ್ ಸಂಜಯ್ ರಾಣಿ ಮನೆಗೆ ಬಂದು ಗಲಾಟೆ ಮಾಡಿದ್ದ. ಇಬ್ಬರ ನಡುವೆ ವಾಗ್ವಾದ ನಡೆದಿ ಜಗಳವಾಗಿದೆ. ಈ ವೇಳೆ ರಾಣಿ ಕಾನ್ಸ್ ಟೇಬಲ್ ಸಂಜಯ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.

ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ಸಂಜಯ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button