Latest

ಬಿಎಸ್ ವೈ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದ ರೇಣುಕಾಚಾರ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಎಂದೂ ಲಾಭಿ ನಡೆಸಿಲ್ಲ. ಅವಕಾಶ ನೀಡಿದರೆ ನಿಭಾಯಿಸುತ್ತೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ದೆಹಲಿಯಿದ ವಾಪಸ್ ಆದ ಬಳಿಕ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿರುವ ರೇಣುಕಾಚಾರ್ಯ, ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ರಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಏನು ನಿರ್ಧರಿಸುತ್ತೆ ನೋಡಬೇಕು. ನಾನು ಸಚಿವ ಸ್ಥಾನಕ್ಕೆ ಲಾಭಿ ಇಟ್ಟಿಲ್ಲ, ಮತ್ತೊಮ್ಮೆ ಮಂತ್ರಿಯಾಗುವ ಅವಕಾಶ ಕೊಟ್ಟರೆ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದರು.

ಯಾರೇ ಸಿಎಂ ಆದರೂ ಸಹಕಾರ ನೀಡುವಂತೆ ನಮ್ಮ ನಾಯಕ ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ಯಡಿಯೂರಪ್ಪ ಹೇಳಿದಂತೆ ನಾವು ನಡೆದುಕೊಳ್ಲುತ್ತೇವೆ. ಯಾರೇ ಸಿಎಂ ಆದರೂ ಬೆಂಬಲಿಸುತ್ತೇವೆ ಎಂದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಸಧೃಢವಾಗಿದೆ. ಮುಂದಿನ ಚುನಾವಣೆಯಲ್ಲಿಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಹಗಲು ಕನಸು ಕಾಣುತ್ತಿದೆ ಎಂದು ಹೇಳಿದರು.
ಕೆಲವೇ ಕ್ಷಣಗಳಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ: ಸಿಎಂ ಅಭ್ಯರ್ಥಿ ಆಯ್ಕೆ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button