Latest

ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಅವರ ಮಗ ಚಂದ್ರಶೇಖರ್ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಶೇಖರ್, ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಶಿವಮೊಗ್ಗದ ಗೌರಿಗದ್ದೆಯಲ್ಲಿ ವಿನಯ್ ಗುರೂಜಿ ಭೇಟಿಯಾಗಿ ಆಶಿರ್ವಾದ ಪಡೆದು ಬಳಿಕ ಮತ್ತೆ ಶಿವಮೊಗ್ಗಕ್ಕೆ ವಾಪಸ್ ಆಗಿ ತನ್ನ ಸ್ನೇಹಿತರ ಜೊತೆ ಕೆಲ ಕಾಲ ಕಳೆದಿದ್ದರು. ಬಳಿಕ ಹೊನ್ನಾಳಿಗೆ ವಾಪಸ್ ಆಗುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಮನೆಗೆ ವಾಪಸ್ ಆಗದೇ ಇರುವುದು ಕುಟುಂಬದವನ್ನು ಆತಂಕಕ್ಕೀಡು ಮಾಡಿದೆ.

ಅಲ್ಲದೇ ಎರಡು ದಿನಗಳಿಂದ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸರಿಗೆ ಕುಟುಂಬ ದೂರು ನೀಡಿದ್ದು, ಪೊಲೀಸರು ರೇಣುಕಾಚಾರ್ಯ ಸಹೋದರನ ಪುತ್ರನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Home add -Advt

KSRTC ಬಸ್ ಅಪಘಾತ; ಚಾಲಕನ ಕಾಲು ಮುರಿತ

https://pragati.taskdun.com/latest/ksrtc-busaccidentmm-hillschamarajanagara/

Related Articles

Back to top button