Film & Entertainment

*ಅವಳೇ ನನ್ನ ಹೆಂಡತಿ… ಎಂದು ಹೊಸ ಆಡಿಯೋ ಬಿಡುಗಡೆ ಮಾಡಿದ ಮಡೆನೂರು ಮನು*

ಪ್ರಗತಿವಾಹಿನಿ ಸುದ್ದಿ: ಸಹಕಲಾವಿದೆಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮತ್ತೊಂದು ಸ್ಫೋಟಕ ಆಡಿಯೊ ಬಿಡುಗಡೆ ಮಡಿದ್ದು, ತನ್ನ ವಿರುದ್ಧ ಆಕೆ ಆರೋಪ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Home add -Advt

ತನ್ನ ವಿರುದ್ಧ ಪ್ರಕರಣ ದಖಲಾಗುತ್ತಿದ್ದಂತೆ, ವಿಡಿಯೋ, ಅಡಿಯೋ ಮೂಲಕ ಸ್ಪಷ್ಟೀಕರಣ ನೀಡುತ್ತಿರುವ ನಟ ಮಡೆನೂರು ಮನು, ಇದೀಗ ಹೊಸ ಆಡಿಯೋ ಬಿಡುಗಡೆ ಮಡಿದ್ದಾರೆ.

ನಾನು ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆಕೆ ನನ್ನ ವಿರುದ್ಧ ಇಂತಹ ದೂರು ನೀಡಲು ಸಾಧ್ಯವೇ ಇಲ್ಲ. ನಾನು ಮಿಂಚುಗೆ ತಾಳಿ ಕಟ್ಟಿದ್ದೇನೆ ನಾವಿಬ್ಬರೂ ಚನ್ನಾಗಿಯೇ ಇದ್ದೇವೆ. ಹಾಗಿರುವಾಗ ನನ್ನ ವಿರುದ್ಧ ಆಕೆ ಆರೋಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಾನು ಮಿಂಚುಗೆ ತಾಳಿ ಕಟ್ಟಿದ್ದೇನೆ. ಅವಳೇ ನನ್ನ ಹೆಂಡತಿ. ನಾನು ಅತ್ಯಾಚಾರ ನಡೆಸಿಲ್ಲ, ನಾನು ಆಕೆ ಜೊತೆ ಸಂಸಾರ ಮಾಡಿದ್ದೇನೆ. ಸ್ವಲ್ಪ ಸಮಯದಿಂದ ಆಕೆಗೆ ಸಮಯ ಕೊಡಲು ಆಗಿರಲಿಲ್ಲ. ಇನ್ಮುಂದೆ ನಾವಿಬರೂ ಚನ್ನಾಗಿಯೇ ಇರುತ್ತೇವೆ, ನಮ್ಮಿಬ್ಬರ ನಡುವೆ ಯಾರೂ ಮಧ್ಯಪ್ರವೇಶಿಸುವುದು ಬೇಡ ಎಂದು ಆಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

Related Articles

Back to top button