ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಆಶ್ರಯ ಧಾಮದಲ್ಲಿದ್ದ 26 ಹುಡುಗಿಯರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ವಿವಿಧ ರಾಜ್ಯಗಳಿಂದ ರಕ್ಷಿಸಲ್ಪಟ್ಟ ಹುಡುಗಿಯರನ್ನು ಭೋಪಾಲ್ ನ ಶೆಲ್ಟರ್ ಹೋಂ ನಲ್ಲಿ ಆಶ್ರಯ ಪಡೆದಿದ್ದರು. ಭೋಪಾಲ್ ನ ಹೊರವಲಯದಲ್ಲಿರುವ ಪರ್ವಾಲಿಯಾ ಪ್ರದೇಶದಲ್ಲಿರುವ ಅಂಚಲ್ ಬಾಲಕಿಯರ ಹಾಸ್ಟೇಲ್ ನಲ್ಲಿದ್ದರು.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಆಶ್ರಯ ಧಾಮಕ್ಕೆ ದಿಢೀರ್ ಭೇಟಿ ನೀಡಿದ್ದ ವೇಳೆ ಇಲ್ಲಿನ 26 ಹುಡುಗಿಯರು ನಾಪತ್ತೆಯಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.
ಹೆಣ್ಣುಮಕ್ಕಳ ಆಶ್ರಯ ಧಾಮದಲ್ಲಿ 68 ಹೆಣ್ಣುಮಕ್ಕಳು ಇದ್ದರು. ಅವರಲ್ಲಿ 26 ಮಂದಿ ಕಾಣೆಯಾಗಿದ್ದಾರೆ. ಆಶ್ರಯ ಧಾಮದ ನಿರ್ದೇಶಕ ಅನಿಲ್ ಮ್ಯಾಥ್ಯೂ ಅವರನ್ನು ಪ್ರಶ್ನಿಸಿದರೆ ಅವರು ಸೂಕ್ತವಾದ ಉತ್ತರ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಶ್ರಯಧಾಮದ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಿಷನರಿಯವರೊಬ್ಬರು ದಿಕ್ಕಿಲ್ಲದ ಮಕ್ಕಳ ರಕ್ಷಿಸಿ, ಈ ಆಶ್ರಯ ಧಾಮದಲ್ಲಿ ಇಟ್ಟಿದ್ದರು. ಆದರೆ ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ಆಶ್ರಯ ಧಾಮ ನಡೆಸುತ್ತಿದ್ದಾರೆ. ಮಕ್ಕಳನ್ನು ರಹಸ್ಯವಾಗಿಡಲಾಗಿದೆ. ಹಾಗೂ ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮದ ಆಚರಣೆ ಅನುಸರಿಸಲು ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ