
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ಹತ್ಯೆಯಾಗಿದ್ದಾಳೆಂದು ಕುಟುಂಬದವರು ಆಕೆಯ ಅಂಯ ಸಂಸ್ಕಾರ ನೆರವೇರಿಸಿ 18 ತಿಂಗಳ ಬಳಿಕ ಆಕೆ ಮರಳಿ ಬಂದು ಅಚ್ಚರಿ ಮೂಡಿಸಿದ್ದಾಳೆ.
ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನವಾಲಿ ಗ್ರಾಮದ ಲಲಿತಾಬಾಯಿ (35) ಎಂಬ ಮಹಿಳೆ ಯನ್ನು ಕೊಲೆ ಮಾಡಿರುವ ಆರೋಪದಲ್ಲಿ ನಾಲ್ವರು ಜೈಲು ಸೇರಿದ್ದಾರೆ. ಆದರೆ ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ ಇದೀಗ ಬದುಕು ಬಂದಿದ್ದಾಳೆ.
ಮಹಿಳೆ ಲಲಿತಾಬಾಯಿ 2023ರ ಸೆಪ್ಟೆಂಬರ್ ನಲ್ಲಿ ನಾಪತ್ತೆಯಾಗಿದ್ದಳು. ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಂಡ್ಲಾ ಪಟ್ಟನದಲ್ಲಿ ತಲೆಯ ಭಾಗ ಸಂಪೂರ್ನ ಜರ್ಜರಿತವಾದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಇದು ಲಲಿತಾಬಾಯಿ ಮೃತದೇಹ ಎನ್ನಲಾಗಿತ್ತು. ಕುಟುಂಬದವರು ಲಲಿತಾಬಾಯಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಮಹಿಳೆ ಗತ್ಯೆ ಪ್ರೈಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಇದೀಗ 18 ತಿಂಗಳ ಬಳಿಕ ಲಲಿತಾಬಾಯಿ ಜೀವಂತವಾಗಿ ತವರಿಗೆ ಬಂದಿದ್ದಾಳೆ. ವಿಚಾರಿಸಿದಾಗ, ತಾನು ಭಾನ್ಪುರಕ್ಕೆ ಹೋಗಿದ್ದಾಗ ಶಾರುಖ್ ಎಂಬಾತ ತನ್ನನ್ನು 5 ಲಕ್ಷ ರೂಪಾಯಿಗೆ ಇನ್ನೋರ್ವ ಶಾರುಖ್ ಎಂಬಾತನಿಗೆ ಮಾರಾಟ ಮಾಡಿದ್ದ. ಆತ ತನ್ನನ್ನು ರಾಜಸ್ಥಾನದ ಕೋಟಾಗೆ ಕರೆದೊಯ್ದಿದ್ದ. ನನ್ನ ಬಳಿ ಮೊಬೈಲ್ ಫೋನ್ ಇರಲಿಲ್ಲ. ಹಾಗಾಗಿ ಕರೆ ಮಾಡಲು, ತಪ್ಪಿಸಿಕೊಂಡು ಬರಲು ಸಾಧ್ಯವಾಗಿರಲಿಲ್ಲ. ಈಗ ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.