Kannada NewsLatestNationalPolitics

*ಮಲ್ಲಿಕಾರ್ಜುನ ಖರ್ಗೆಗೆ ವಾರಂಟ್ ಜಾರಿ ಮಾಡಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಬಜರಂಗ ದಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದ್ದು, ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆಯುವಂತೆ ಖರ್ಗೆಗೆ ಸೂಚನೆ ನೀಡಿದೆ.

Home add -Advt

ಸಂಗ್ರೂರ್ ನಿವಾಸಿ ಹಾಗೂ ಬಜರಂಗ ದಳದ ಕಾರ್ಯಕರ್ತ ಹಿತೇಶ್ ಭಾರ್ದ್ವಾಜ್ 2023ರಲ್ಲಿ ದಾಖಲಿಸಿದ್ದ ಮಾನಹಾನಿ ದೂರಿನ ಆಧಾರದ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ ಈ ದೂರು ಸಲ್ಲಿಸಲಾಗಿತ್ತು.

ದೂರುದಾರ ಹಿತೇಶ್ ಭಾರ್ದ್ವಾಜ್ ಅವರ ಆರೋಪದ ಪ್ರಕಾರ, ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸೇರಿದಂತೆ ಇತರ ಸಂಘಟನೆಗಳೊಂದಿಗೆ ಹೋಲಿಕೆ ಮಾಡಿತ್ತು. ಇದರಿಂದ ಬಜರಂಗ ದಳದ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದ್ದರು. ಅಕ್ರಮ ಸಂಘಟನೆಗಳೊಂದಿಗೆ ಬಜರಂಗ ದಳವನ್ನು ಸಂಪರ್ಕಿಸಿರುವುದರಿಂದ ಅದರ ಸದಸ್ಯರು ಮತ್ತು ಬೆಂಬಲಿಗರ ಮಾನಹಾನಿಯಾಗಿದೆ ಎಂದು ಭಾರ್ದ್ವಾಜ್ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ 100 ಕೋಟಿ ಮಾನಹಾನಿ ಪರಿಹಾರ ಹಾಗೂ 10 ಲಕ್ಷ ಕಾನೂನು ವೆಚ್ಚ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Related Articles

Back to top button