Latest

ಸಾಲ ತೀರಿಸಲಾಗದೆ ಮಗುವನ್ನೇ ಮಾರಿದ ಮಹಾಶಯ !

ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ: ಸಾಲ ತೀರಿಸಲು ಹಾಗೂ ಪತ್ನಿಯ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬ ತನ್ನ 25 ದಿನಗಳ ಹಸುಗೂಸನ್ನೇ ಮಾರಾಟ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಬಸವ ಎಂಬಾತ ಈ ಕೃತ್ಯವೆಸಗಿದವ. ಈತ ಹೋಟೆಲ್ ಕಾರ್ಮಿಕನಾಗಿದ್ದಾನೆ. ನಾಗವೇಣಿ ಎಂಬಾಕೆ ಜತೆ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ 7 ವರ್ಷದ ಮಗನಿದ್ದಾನೆ. 25 ದಿನಗಳ ಹಿಂದೆ ನಾಗವೇಣಿ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಮಕ್ಕಳ ಹಕ್ಕು ರಕ್ಷಣೆ ಅಧಿಕಾರಿಗಳು ಹಾಗೂ ಪೊಲೀಸರೆದುರು ಆರೋಪಿ ಹೇಳಿಕೊಂಡ ಪ್ರಕಾರ ತಾನೂ ಅನಾರೋಗ್ಯಕ್ಕೆ ಒಳಗಾಗಿದ್ದು ಪತ್ನಿ ನಾಗವೇಣಿಗೆ ಹೃದಯದ ಕಾಯಿಲೆಯಿತ್ತು. ಪತ್ನಿಯ ಹೆರಿಗೆಗಾಗಿ ಹಾಗೂ ತನ್ನ ಚಿಕಿತ್ಸೆಗಾಗಿ  ಸಾಲ ಪಡೆದಿದ್ದ. ಆದರೆ ಹಣ ಹೊಂದಿಸಲು ಸಾಧ್ಯವಾಗದ ಕಾರಣ ಮಗುವನ್ನು ಮಾರಾಟ ಮಾಡುವುದಾಗಿ ಹಾಗೂ ಯಾರಾದರೂ ಇದ್ದರೆ ಹೇಳುವಂತೆ ಸಹೋದ್ಯೋಗಿ ಬಳಿ ಹೇಳಿಕೊಂಡಿದ್ದ. ಆದರೆ ಸಹೋದ್ಯೋಗಿ ಅದಕ್ಕೆ ಒಪ್ಪಿರಲಿಲ್ಲ.

ಕೊನೆಗೆ ಸಹೋದ್ಯೋಗಿಯನ್ನು ತೀವ್ರವಾಗಿ ಕಾಡಿಸಿದಾಗ ಆತ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಮಗು ಬೇಕಾಗಿರುವುದನ್ನು ತಿಳಿಸಿದ್ದು ಮಗುವನ್ನು ಮಾರಾಟ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಮಗು ಮಾರುವುದನ್ನು ತನ್ನ ಪತ್ನಿ ವಿರೋಧಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದ ಬಸವ, ತಾನು ಕುಟುಂಬವನ್ನೇ ತೊರೆದು ಹೋಗುವ ಬೆದರಿಕೆ ಒಡ್ಡಿದ್ದಲ್ಲದೆ ಆಕೆಯಿಂದ ಬಿಳಿ ಹಾಳೆ ಮೇಲೆ ಬಲವಂತದಿಂದ ಸಮ್ಮತಿ ಪಡೆದಿರುವುದು ಸಹ ತನಿಖೆಯಿಂದ ಬೆಳಕಿಗೆ ಬಂದಿದೆ.

ಪೊಲೀಸರು ಮಗು ಖರೀದಿಸಿದವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

‘ಥ್ಯಾಂಕ್ ಗಾಡ್’ ಚಿತ್ರ ನಿಷೇಧಿಸಲು ಒತ್ತಾಯಿಸಿದ ಶಿಕ್ಷಣ ಸಚಿವ; ಕೇಂದ್ರ ಸಚಿವರಿಗೆ ಪತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button