Latest

‘ಥ್ಯಾಂಕ್ ಗಾಡ್’ ಚಿತ್ರ ನಿಷೇಧಿಸಲು ಒತ್ತಾಯಿಸಿದ ಶಿಕ್ಷಣ ಸಚಿವ; ಕೇಂದ್ರ ಸಚಿವರಿಗೆ ಪತ್ರ

ಪ್ರಗತಿವಾಹಿನಿ ಸುದ್ದಿ, ಭೋಪಾಲ್: ಅಜಯ್ ದೇವಗನ್ ನಟನೆಯ, ಸಿದ್ಧಾರ್ಥ್  ಮಲ್ಹೋತ್ರಾ ಅವರ ಮುಂಬರುವ ಚಿತ್ರ “ಥ್ಯಾಂಕ್ ಗಾಡ್’ ನಿಷೇಧಿಸುವಂತೆ ಮಧ್ಯಪ್ರದೇಶ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಚಿತ್ರದಲ್ಲಿ ಹಿಂದೂ ದೇವರುಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದು ಭಾವನೆಗಳಿಗೆ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಬೇಕು ಎಂದು ಸಾರಂಗ್ ಆಗ್ರಹಿಸಿದ್ದಾರೆ.  ಆದರೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಇದಕ್ಕೆ ಇನ್ನೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. 

ಅಪಘಾತದ ನಂತರ ಬಹುತೇಕ ಸತ್ತಿರುವ ಸಾಮಾನ್ಯ ಮನುಷ್ಯನ ಕಥೆ ಹೊಂದಿರುವ ಈ ಚಿತ್ರದಲ್ಲಿ ಅಜಯ್ ದೇವಗನ್ ಚಿತ್ರಗುಪ್ತನಾಗಿ ನಟಿಸಿದ್ದಾರೆ. ಸಿದ್ಧಾರ್ಥ್ ಮತ್ತು ರಾಕುಲ್ ತೆರೆಯ ಮೇಲೆ ಹೊಸ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಖ್ಯಾತ ಕೊಮೆಡಿಯನ್, ನಟ ರಾಜು ಶ್ರೀವಾಸ್ತವ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button