Uncategorized

*ಕುಡಿದ ಮತ್ತಿನಲ್ಲಿ ನೀರೆಂದು ತಿಳಿದು ಆಸಿಡ್ ಕುಡಿದ ವ್ಯಕ್ತಿ; ಆಸ್ಪತ್ರೆಯಲ್ಲಿ ಸಾವು*

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಕುಡಿದ ಮತ್ತಿನಲ್ಲಿ ನೀರೆಂದು ಭಾವಿಸಿ ಆಸಿಡ್ ಕುಡಿದಿದ್ದ ವ್ಯಕ್ತಿ ಜೀವನ್ಮರಣದ ನಡುವೆ ಹೋರಾಡಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

40 ವರ್ಷದ ಸಿದ್ದರಾಜು ಮೃತ ವ್ಯಕ್ತಿ. ಕೊಳ್ಲೆಗಾಲದ ಮುಳ್ಲುರು ಗ್ರಾಮದ ನಿವಾಸಿ ಸಿದ್ದರಾಜು, ಜುಲೈ 23ರಂದು ಕುಡಿದ ಮತ್ತಿನಲ್ಲಿ ನೀರೆಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್ ಗೆ ಬಳಸುವ ಆಸಿಡ್ ಕುಡಿದಿದ್ದಾನೆ. ಕೆಲ ಹೊತ್ತಲ್ಲೇ ಬಿದ್ದು ಒದ್ದಾಡಿದ್ದಾನೆ. ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಿದ್ದರಾಜು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button