ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಶುರುವಾದ ಧ್ವಜ ವಿವಾದ ಏಕಾಏಕಿ ರಾಜಕೀಯ ತಿರುವು ಪಡೆದುಕೊಂಡಿದೆ. ಹನುಮ ಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಿದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯ ಚಲೋ ನಡೆಸಿದ್ದಾರೆ. ಇದೀಗ ಕಾಂಗ್ರೆಸ್ ತ್ರಿರಂಗ ನಡಿಗೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಮಂಡ್ಯ ಶಾಸಕ ರವಿ ಗಾಣಿಗ ಮಾತನಾಡಿ ನಾನು ಶಾಂತಿ ಸಭೆ ನಡೆಸಲು ಹೋಗಿದ್ದರೆ ಕೊಲೆ ಮಾಡುತ್ತಿದ್ದರು. ನನ್ನ ಫ್ಲೆಕ್ಸ್ ಅನ್ನೇ ಬಿಡುತ್ತಿಲ್ಲ ಇನ್ನು ನಾನೇ ಹೋಗಿದ್ರೆ ಬಿಡ್ತಿದ್ರಾ? ನನಗೂ ಕೇಸರಿ ಧ್ವಜ ವಿವಾದಕ್ಕೂ ಸಂಬಂಧವಿಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಾವು ಶಾಂತಿ ಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಶಾಂತಿ ಯಾತ್ರೆ ದಿನಾಂಕ ಘೋಷಣೆ ಮಾಡುತ್ತೇವೆ. ನಾನೂ ಕೂಡ ಹಿಂದೂ, ಎಲ್ಲಾ ದೇವರನ್ನೂ ಪೂಜೆ ಮಾಡುತ್ತೇನೆ. ಮಂಡ್ಯ ಆರ್.ಎಸ್ ಎಸ್ ಕಚೇರಿಗೆ ನಾನು 1 ಲಕ್ಷ ದೇಣಿಗೆ ಕೊಟ್ಟಿದ್ದೇನೆ. ಜನವರಿ 22ರಂದು ಸ್ಥಳೀಯ ರಾಮ ಮಂದಿರಕ್ಕೆ ಹೋಗಿದ್ದೇನೆ. ಬಿಜೆಪಿಯವರಿಂದ ದೇವರನ್ನು ಪೂಜೆ ಮಾಡಲು ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ