ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದ ಸುಪ್ರಸಿದ್ಧ ಮಂಗಾಯಿದೇವಿ ಜಾತ್ರೆಯು ಅತೀ ವೈಭವದಿಂದ ನಡೆಯುತ್ತಿದೆ. ಜಾತ್ರೆಗೆ ಆಗಮಿಸಿದ ಭಕ್ತರು ಶ್ರದ್ಧಾ ಭಕ್ತಿಯಿಂದ ಸರದಿ ಸಾಲಿನಲ್ಲಿ ನಿಂತು, ದೇವಿಯ ದರ್ಶನ ಪಡೆದುಕೊಂಡರು.
ಬೆಳಗಾವಿ ನಗರದ ವಡಗಾವಿಯಲ್ಲಿ ನೆಲೆಸಿರುವ ಮಂಗಾಯಿದೇವಿ ಜಾತ್ರೆಯು ಪ್ರತಿವರ್ಷ ನಡೆಯುತ್ತಾ ಬಂದಿದೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ಅನೇಕ ಭಾಗಗಳಿಂದ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ ಪ್ರಾಣಿ ಬಲಿ ಕೋಡಲಾಗುತಿತ್ತು, ಆದರೆ ಈ ವರ್ಷದಿಂದ ಪಶು ಪ್ರಾಣಿ ಜಾಗೃತಿ ಮಹಾಸಂಘದ ಮನವಿ ಮೇರೆಗೆ ಜಿಲ್ಲಾಡಳಿತ ದೇವಸ್ಥಾನದ ಆವರಣದಲ್ಲಿ ಪ್ರಾಣಿ ಬಲಿ ಮಾಡಬಾರದು ಎಂದು ಅದೇಶ ಹೋರಡಿಸಿದೆ. ಹಾಗಾಗಿ ಪ್ರಾಣಿ ಬಲಿ ಇಲ್ಲದೆ ಈ ವರ್ಷ ಜಾತ್ರೆ ಅತೀ ಉತ್ಸಾಹದಿಂದ ನಡೆಯುತ್ತಿದ್ದು, ಅದಕ್ಕೆ ದಯಾನಂದ ಸ್ವಾಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಸದಸ್ಯೆ ರೇಷ್ಮಾ ಮಾತನಾಡಿ, ನೂರಾರು ವರ್ಷಗಳಿಂದ ಬೆಳಗಾವಿಯ ವಡಗಾವಿಯಲ್ಲಿ ಮಂಗಾಯಿ ದೇವಿ ಜಾತ್ರೆ ನಡೆಸಿಕೊಂಡು ಬರುತ್ತಿದೆ. ಮಂಗಾಯಿ ದೇವಿ ಆರ್ಶೀವಾದದಿಂದ ಮಳೆ ಬೆಳೆ ಆಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೋರ್ವ ಪಾಲಿಕೆ ಸದಸ್ಯೆ ದೀಪಾ ಮಾತನಾಡಿ, ಇಂದಿನಿಂದ ಮಂಗಾಯಿ ಜಾತ್ರೆ ಆರಂಭಗೊಂಡಿದೆ ಗೋವಾ ಮಹಾರಾಷ್ಟ್ರ ದಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ ವರ್ಷವೂ ಕೂಡ ಜಾತ್ರೆ ಸಂಭ್ರಮದಿಂದ ನಡೆಯುತ್ತಿದೆ. ಜಾತ್ರಾ ಸ್ಥಳದಲ್ಲಿ ಪಾಲಿಕೆಯಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ