ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಜೊತೆಗೆ ಕನ್ನಡ–ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಬಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ಗೆ ಬೆಳಗಾವಿ ಜಿಲ್ಲಾ ಮತ್ತು ತಾಲೂಕಾ ಘಟಕಗಳಿಗೆ ನೂತನ ಪಧಾಧಿಕಾರಿಗಳನ್ನು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಗಲಾ ಮೆಟಗುಡ್ಡ, ಗೌರವ ಕರ‍್ಯದರ್ಶಿಗಳಾಗಿ ಮಹಾಂತೇಶ ಮೆಣಶಿನಕಾಯಿ, ಸುನೀಲ್ ಎನ್ ಹಲವಾಯಿ, ಕೋಶಾಧ್ಯಕ್ಷರಾಗಿ ರತ್ನಪ್ರಭಾ ವಿ ಬೆಲ್ಲದ, ಮಹಿಳಾ ಪ್ರತಿನಿಧಿಗಳಾಗಿ ಜಯಶೀಲಾ ಬ್ಯಾಕೋಡ, ಪ್ರತಿಭಾ ಅಡಿವಯ್ಯ ಕಳ್ಳಿಮಠ, ಪರಿಶಿಷ್ಠ ಜಾತಿ (ಎಸ್.ಸಿ) ಪ್ರತಿನಿಧಿಯಾಗಿ ಅವಳೆಕುಮಾರ, ಮಲ್ಲಿಕಾರ್ಜುನ ಸೆದೆಪ್ಪ ಕೋಳಿ, ಪರಿಶಿಷ್ಠ ಪಂಗಡ(ಎಸ್.ಟಿ) ಪ್ರತಿನಿಧಿಯಾಗಿ ಎಫ್ ವಾಯ್ ತಳವಾರ, ಸಂಘ ಸಂಸ್ಥೆ ಪ್ರತಿನಿಧಿಯಾಗಿ ಚನ್ನಪ್ಪ ಘಟಿಗೆಪ್ಪ ಪಾಟೀಲ, ಜಿಲ್ಲಾ ವಾರ್ತಾಧಿಕಾರಿಯಾಗಿ ಗುರುನಾಥ ಕಡಬೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗಡಿ ಜಿಲ್ಲಾ ಘಟಕ ವಿಶೇಷ ಪ್ರತಿನಿಧಿಯಾಗಿ ವಿದ್ಯಾವತಿ ಆರ್ ಜನವಾಡೆ, ವೀರಭದ್ರ ಮ ಅಂಗಡಿ, ಜಿಲ್ಲಾ ಘಟಕದ ವಿಶೇಷ ಆಹ್ವಾನಿತ ಗಣ್ಯರಾಗಿ ಆಕಾಶ ಅರವಿಂದ ಥಬಾಜ, ಶಿವಾನಂದ ತಲ್ಲೂರ, ಪದ್ಮರಾಜ ವೈಜಣ್ಣವರ, ಮಹಾದೇವ ಬಳಿಗಾರ, ಡಾ.ಜಗದೀಶ ಹಾರುಗೊಪ್ಪ, ಅಪ್ಪಾಸಾಹೇಬ ಮ ಅಲಿಬಾದಿ, ಜಯಶ್ರೀ ನಿರಾಕಾರಿ, ಭಾರತಿ ಮಠದ, ರೋಹಿಣಿ ಯಾದವಾಡ, ಸುಧಾ ಪಾಟೀಲ ರನ್ನು ನೇಮಕ ಮಾಡಿರುವುದಾಗಿ ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ತಾಲೂಕಾ ಕಸಾಪ ಅಧ್ಯಕ್ಷರಾಗಿ ಸುರೇಶ ಹಂಜಿ, ಹುಕ್ಕೇರಿ ತಾಲೂಕಾ ಅಧ್ಯಕ್ಷರಾಗಿ.ಪ್ರಕಾಶ ಬಸವಪ್ರಭು ಹ ಅವಲಕ್ಕಿ, ಖಾನಾಪೂರ ತಾಲೂಕಾ ಅಧ್ಯಕ್ಷರಾಗಿ ಬಸಪ್ರಭು ಶಿದ್ದಲಿಂಗಯ್ಯ ಹಿರೇಮಠ, ರಾಮದುರ್ಗ ತಾಲೂಕಾ ಅಧ್ಯಕ್ಷರಾಗಿ ಪಾಂಡುರಂಗ ಜಟಗನ್ನವರ, ಗೋಕಾಕ ತಾಲೂಕಾ ಅಧ್ಯಕ್ಷರಾಗಿ ಶ್ರೀಮತಿ.ಭಾರತಿ ಮದಭಾವಿ, ಸವದತ್ತಿ ತಾಲುಕಾ ಅಧ್ಯಕ್ಷರಾಗಿ ಡಾ.ಯಲ್ಲಪ್ಪ ಮ ಯಾಕೊಳ್ಳಿ, ಬೈಲಹೊಂಗಲ ತಾಲೂಕಾ ಅಧ್ಯಕ್ಷರಾಗಿ ನಿಂಗಪ್ಪ ಆರ್ ಠಕ್ಕಾಯಿ, ಚಿಕ್ಕೋಡಿ ತಾಲೂಕಾ ಅದ್ಯಕ್ಷರಾಗಿ ಡಾ.ಸುರೇಶ ಬಸಲಿಂಗಪ್ಪ ಉಕ್ಕಲಿ, ನಿಪ್ಪಾಣಿ ತಾಲೂಕಾ ಅದ್ಯಕ್ಷರಾಗಿ ಈರಣ್ಣ ಮಹಾದೇವ ಶಿರಗಾವಿ, ಕಾಗವಾಡ ತಾಲೂಕಾ ಅದ್ಯಕ್ಷರಾಗಿ ಡಾ.ಶಿದಗೌಡ ಅಲಗೌಡ ಕಾಗೆ, ಕಿತ್ತೂರ ತಾಲೂಕಾ ಅಧ್ಯಕ್ಷರಾಗಿ ಡಾ.ಶ್ರೀಕಾಂತ ಬೈಲಪ್ಪ ದಳವಾಯಿ, ರಾಯಭಾಗ ತಾಲೂಕಾ ಆದ್ಯಕ್ಷರಾಗಿ ರವೀಂದ್ರ ಮಲಗೌಡ ಪಾಟೀಲ, ಯರಗಟ್ಟಿ ತಾಲೂಕಾ ಅದ್ಯಕ್ಷರಾಗಿ ತಮ್ಮಣ್ಣ ಎಮ್ ಕಾಮಣ್ಣವರ, ಅಥಣಿ ತಾಲೂಕಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗಪ್ಪ ಕನಶೆಟ್ಟಿ, ಮೂಡಲಗಿ ತಾಲೂಕಾ ಅದ್ಯಕ್ಷರಾಗಿ ಡಾ.ಸಂಜಯ ಅಪ್ಪಯ್ಯ ಸಿಂದಿಹಟ್ಟಿ ರವರನ್ನು ನೇಮಕ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ನೆಹರು ನಗರದಲ್ಲಿರುವ ಕನ್ನಡಭವನದಲ್ಲಿ ಪೆಬ್ರುವರಿ 6 ರಂದು ಮದ್ಯಾಹ್ನ 3ಕ್ಕೆ ಆಯೋಜಿಸಲಾಗಿರುವ ಧ್ವಜ ಹಸ್ತಾಂತರ ಕರ‍್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಧ್ವಜ ಹಸ್ತಾಂತರಿಸಿ ಕಸಾಪ ಮೂಲಕ ಜಿಲ್ಲೆಯಲ್ಲಿ ಕನ್ನಡ ನಾಡು ನುಡಿ ನೆಲದ ಅಭಿವೃದ್ದಿ ರಕ್ಷಣೆ ಕರ‍್ಯಕ್ಕೆ ಚಾಲನೆ ನೀಡಲಾಗುವುದು ಎಂದು ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.
ಫೆಬ್ರವರಿ 6ರಂದು ಬೆಳಗಾವಿ ಜಿಲ್ಲಾ ಕಸಾಪ ಧ್ವಜ ಹಸ್ತಾಂತರ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ