Kannada NewsKarnataka NewsLatest

*ಅಪಾರ್ಟ್ ಮೆಂಟ್ ನಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ ಸಾವು*

ಪ್ರಗತಿವಾಹಿನಿ ಸುದ್ದಿ: ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮಂಗಳೂರು ಬಳಿಯ ಕುತ್ತಾರು ಎಂಬಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ವೈದ್ಯ ದಂಪತಿಯ ಪುತ್ರಿ ಸಾವನ್ನಪ್ಪಿದ್ದಾಳೆ. ಹಿಬಾ ಐಮನ್ (15) ಮೃತ ವಿದ್ಯಾರ್ಥಿನಿ

ಡಾ.ಮುಮ್ತಾಜ್ ಅಹ್ಮದ್ ದಂಪತಿ ಅಪಾರ್ಟ್ ಮೆಂಟ್ ನ 12ನೇ ಮಹಡಿಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಬಟ್ಟೆ ಒಣಗಿಸಲೆಂದು ಹೋಗಿದ್ದ ಹಿಬಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button