
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ-ಐಜಿಪಿ ಪ್ರವೀಣ್ ಸೂದ್ ಶಾಕಿಂಗ್ ಸುದ್ದಿಯನ್ನು ಬಹಿರಂಗಗೊಳಿಸಿದ್ದು, ಇದೊಂದು ಉಗ್ರರ ಕೃತ್ಯ ಎಂದು ಹೇಳಿದ್ದಾರೆ.
ಮಂಗಳೂರಿನ ನಾಗರಿ ಬಳಿ ನಿನ್ನೆ ರಾತ್ರಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಆಟೋದಲ್ಲಿದ್ದ ಕುಕ್ಕರ್ ಛಿದ್ರ ಛಿದ್ರಗೊಂಡಿತ್ತು. ಘಟನೆಯಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರು ಗಾಯಗೊಂಡಿದ್ದರು.
ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಟೋದಲ್ಲಿ ನಿಗೂಢ ಸ್ಫೋಟ ಅನಿರೀಕ್ಷಿತ ಘಟನೆಯಲ್ಲ. ಉದ್ದೇಶಪೂರ್ವಕವಾಗಿ ಉಗ್ರರು ನಡೆಸಿರುವ ಕೃತ್ಯ. ಹಾನಿ ಉಂಟು ಮಾಡಲೆಂದೇ ಈ ಕೃತ್ಯವೆಸಗಲಾಗಿದ್ದು, ಸಾವು, ನೋವು ಹಾನಿ ಉಂಟು ಮಾಡಲು ದುಷ್ಕರ್ಮಿಗಳು ಯೋಜನೆ ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಕರ್ನಾಟಕ ಪೊಲೀಸರಿಂದ ಸೂಕ್ಷ್ಮ ಹಾಗೂ ಆಳವಾದ ತನಿಖೆ ನಡೆಯುತ್ತಿದೆ. ಕೇಂದ್ರ ತನಿಖಾ ತಂಡದಿಂದ ಜೊತೆ ಸೇರಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಸ್ಥಳ ಬೆಂಗಳೂರು – ಸಿಎಂ ಬೊಮ್ಮಾಯಿ