Kannada NewsKarnataka NewsLatest

ಶ್ರೀ ಶಂಕರಾನಂದ ಮಹಾಸ್ವಾಮಿಗಳು ಲಿಂಗೈಕ್ಯ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ಜಲಪಾತದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಶಂಕರಧಾಮ(ಯರಗಲ ಮಠ)ದ  ಶ್ರೀ ಶಂಕರಾನಾಂದ ಮಹಾಸ್ವಾಮಿಗಳು (೫೫) ಇವರು ಅನಾರೋಗ್ಯದ ಹಿನ್ನೆಲೆ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸಂಸಾರಿಕ ಮಠದ ಸ್ವಾಮಿಜಿಗಳಾಗಿದ್ದ ಇವರು ಪತ್ನಿ, ಮಗ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಾಯಂಕಾಲ ತಡವಾಗಿ ಮಠದಲ್ಲಿ ಕಾಕಡಾರತಿ ಪೂಜೆ ಸಲ್ಲಿಸಿ, ವಿಶ್ರಾಂತಿಗೆ ಜಾರುವ ಮುಂಚೆ ಕುಸಿದು ಬಿದ್ದಿದ್ದು, ಭಕ್ತರು ಸೇರಿ ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ವಿಜಯಪುರ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಯಾದಗಿರಿ ಜಿಲ್ಲೆಯ ಯರಗಲ್ ಗ್ರಾಮದ ಶ್ರೀಗಳ ಅಂತ್ಯಕ್ರಿಯೆ ಜರುಗಿದೆ. ೧೯೮೦ರಲ್ಲಿ ಶ್ರೀ ರಘುನಾಥ ಸ್ವಾಮಿಜಿ ಸ್ವರ್ಗಸ್ಥರಾದ ನಂತರ ೧೯೮೧ರಲ್ಲಿ ಗೋಕಾಕ ಫಾಲ್ಸ್ ಯರಗಲ ಮಠದ ಭಕ್ತರು ಇವರನ್ನು ಕರೆ ತಂದು ಪಟ್ಟಾಭಿಷೇಕ ಮಾಡಿದ್ದು, ಅಂದಿನಿಂದ ಇಂದಿನವರೆಗೆ ಶ್ರೀಮಠದ ಜವಾಬ್ದಾರಿ ಹೊಂದಿದ್ದರು.

Home add -Advt

ಪ್ರತಿ ವರ್ಷದ ಶ್ರಾವಣ ಮಾಸದ ಸಪ್ತಾಹದ ಜೊತೆಗೆ ಧಾರ್ಮಿಕ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು, ಬೆಳಗಾವಿ, ವಿಜಯಪುರ, ಯಾದಗಿರಿ, ಬಾಗಲಕೋಟ, ಗುಲ್ಬರ್ಗಾ ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದ ಪೂನೆ, ಮುಂಬೈ ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು.

Related Articles

Back to top button