Belagavi NewsBelgaum NewsKannada NewsKarnataka NewsPolitics

*ಕಾಂಗ್ರೆಸ್ ನವರು ಬಹಳಷ್ಟು ಜನ ಬಿಜೆಪಿಗೆ ಬರಲು ರೆಡಿ ಇದಾರೆ: ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜು ಕಾಗೆ ಸೇರಿದಂತೆ ಬಹಳಷ್ಟು ಜನ ಕಾಂಗ್ರೆಸ್ ನವರು ಬರಲು ರೆಡಿ ಇದಾರೆ. ಅಲ್ಲಿನ ಇನ್ ಫೈಟಿಂಗ್ ಯಾವಾಗ ಸ್ಪೋಟ ಆಗುತ್ತೆ ಗೊತ್ತಾಗುತ್ತಿಲ್ಲ ಎಂದು ಕಾಂಗ್ರೆಸ್ ಅಸಮಾಧಾನಿತ ಶಾಸಕರು ಬಿಜೆಪಿಗೆ ಬರ್ತಾರಾ ಎಂಬ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿಕೆ ನೀಡಿದರು.‌

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗ್ತಾರೆ ಎಂಬುದು ಗೊತ್ತಿಲ್ಲ. ಆದರೆ ಸರ್ಕಾರ ಕೊಲ್ಯಾಪ್ಸ್ ಆಗುತ್ತೆ. ನಾವು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ‌. ಅವರೇ ಬರ್ತಾರೆ ಇದಕ್ಕೆ ಆಪರೇಷನ್ ಕಮಲ ಅಂತಾರೆ ಎಂದರು.

Home add -Advt

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸರ್ಕಾರದಲ್ಲಿ ಯಾವುದೇ ಕೆಲಸ ಆಗ್ತಿಲ್ಲ. ಸರ್ಕಾರ ದೀವಾಳಿ ಆಗಿದೆ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವ ಕೆಲಸ ಆಗ್ತಿಲ್ಲ ಅಂತಾ ಆಡಳಿತ ಪಕ್ಷದವರು ಹೇಳ್ತಿದ್ದಾರೆ‌ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದರು. 

ಮೂಗಿಗೆ ತುಪ್ಪು ಒರೆಸುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ ಟೆಂಡರ್ ಮಾಡೋದು ವರ್ಕ್ ಆರ್ಡರ್ ಕೊಡುವುದಿಲ್ಲ. ರಾಜು ಕಾಗೆ, ಬಿಆರ್ ಪಾಟೀಲ್ ಹೇಳಿಕೆ ಸರಿ ಇದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದರು. 

Related Articles

Back to top button