Belagavi NewsBelgaum NewsKannada NewsKarnataka NewsPolitics

*ಗ್ಯಾರಂಟಿ ಕೊಟ್ಟಿದ್ದೇವೆ ಅಂದ್ರೇ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲಾ: ಸರ್ಕಾರದ ವಿರುದ್ಧ ಸಿಟಿ ರವಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಮೊದಲು ಜಮೀರ್ ಅಹಮ್ಮದ್ ಅವರ ರಾಜೀನಾಮೆ ತಗೊಳ್ಳಿ ಎಂದು ಶಾಸಕ ಬಿ ಆರ್ ಪಾಟೀಲ್ ಆಡಿಯೋ ವೈರಲ್ ವಿಚಾರವಾಗಿ ಎಂಎಲ್ಸಿ ಸಿಟಿ ರವಿ ಅವರು ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಇದು ಖಾಸಗಿ ವಿಷಯ ಅಲ್ಲ, ಹಾಗಾಗಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ ಎಂದು ಆಗ್ರಹಿಸಿದರು. 

ಗ್ಯಾರಂಟಿ ಕೊಟ್ಟಿದ್ದೇವೆ ಅಂದ್ರೇ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲಾ. ನೀವು ಇಲಾಖೆಗಳಲ್ಲಿ ರೇಟ್ ಕಾರ್ಡ್ ಹಾಕಿದ್ದಿರಿ. ಕಾಂಗ್ರೆಸ್ ಶಾಸಕ ರಾಜು ಕಾಗೆ ಬಿಜೆಪಿ ಶಾಸಕ ಅಲ್ಲಾ ಅವರೆ ಸರ್ಕಾರದಲ್ಲಿ ಒಂದು ಪೈಸೆ ಕೆಲಸ ಆಗ್ತಿಲ್ಲ ಅಂತಾ ಹೇಳಿದ್ದಾರೆ. 

ಸರ್ಕಾರ ಬಂದ್ಮೇಲೆ ಬೆಲೆ ಏರಿಕೆ ಮಾಡಿದ್ದೇ ದೊಡ್ಡ ಕೆಲಸ. ವರ್ಕ್ ಆರ್ಡರ್ ಇಷ್ಟು ಆಗ್ತಿಲ್ಲ, ರಾಜು ಕಾಗೆ ಇರೋ ಸತ್ಯ ಹೇಳಿದ್ದಾರೆ. ನಿಮಗೆ ಇನ್ನೂ ಮೂರು ವರ್ಷ ಇದೆ, ಅವಲೋಕನ ಮಾಡಿಕೊಳ್ಳಿ. ಆಡಳಿತ ಪಕ್ಷದವರು ಮಾತಾಡ್ತಿದ್ದಾರೆ, ಅಂದ್ರೇ ಮುಖ್ಯಮಂತ್ರಿ ಪೂರ್ವಾಗ್ರಹವಾಗಿ ಮಾತಾಡ್ತಿದ್ದಾರೆ ಅಂತಿದ್ರೂ ಈಗ ಹಾಗೇ ಅನ್ನೋಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button