Latest

ಪೊಲೀಸರ ಹೆಸರಲ್ಲಿ ದಾಳಿ; ವಿವಾಹವಾದ ವಧುವನ್ನೇ ಕಿಡ್ನ್ಯಾಪ್ ಮಾಡಿದ ಪೋಷಕರು

ಪ್ರಗತಿವಾಹಿನಿ ಸುದ್ದಿ; ನೆಲಮಂಗಲ: ಯುವತಿಯ ಮನೆಯವರ ವಿರೋಧದ ನಡುವೆಯೂ ಮದುವೆಯಾದ ನವವಿವಾಹಿತೆಯನ್ನು ಪೋಷಕರೆ ಕಿಡ್ನಾಪ್ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.

ನೆಲಮಂಗಲದ ವೀರಸಾಗರ ನಿವಾಸಿಗಳಾದ ಗಂಗಾಧರ ಹಾಗೂ ಜಲಜ ಮೇ 25ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ವರನ ಅಕ್ಕನ ಮನೆಯಲ್ಲಿ ನವಜೋಡಿ ತಂಗಿದ್ದರು. ಈ ವೇಳೆ ಬ್ಯಾಡರಹಳ್ಳಿ ಪೊಲೀಸರು ಎಂದು ಹೇಳಿಕೊಂಡು ಬಂದ ಗುಂಪೊಂದು ಮನೆ ಮೇಲೆ ದಾಳಿ ನಡೆಸಿದ್ದಲ್ಲದೇ ವಧುವನ್ನು ಅಪಹರಿಸಿದ್ದಾರೆ. ಮನೆಯವರ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Home add -Advt

ಜಲಜ ತನ್ನ ಮಾವನ ಮಗಳು ನಾವು 8 ವರ್ಷದಿಂದ ಪ್ರೀತಿಸುತ್ತಿದ್ದೆವು. ಆಕೆಗೆ ಮನೆಯಲ್ಲಿ ಮಾತನಾಡುವಂತೆಯೂ ಹೇಳಿದ್ದೆ. ಮೇ 25ರಂದು ದೇವಸ್ಥಾನದಲ್ಲಿ ನಾವು ಮದುವೆಯಾಗಿದ್ದೆವು. ಬಳಿಕ ಆಕೆ ಮನೆಯವರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು ಎಂದು ವರ ಅಳಲು ತೋಡಿಕೊಂಡಿದ್ದಾನೆ.

ನವವಿವಾಹಿತೆಯನ್ನು ಆಕೆಯ ಮನೆಯವರೇ ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉದ್ಯಮಿಗಳಿಗೆ IT ಶಾಕ್; 30ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ

Related Articles

Back to top button