Belagavi NewsBelgaum NewsKarnataka News

*ಬೃಹತ್ ಉದ್ಯೋಗ ಮೇಳ: ತಕ್ಷಣವೆ 717 ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಇಂದು ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜರುಗಿತು.

ಉದ್ಯೋಗ ಮೇಳದಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಮೂಲದ Wistron, Honda, TATA Electronics, Foxconn ಮುಂತಾದ ಪ್ರಮುಖ ತಯಾರಿಕಾ ಕಂಪನಿಗಳು ಭಾಗವಹಿಸಿದ್ದವು. ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ವಿವಿಧ ವಿಭಾಗಗಳಲ್ಲಿ ಪದವಿ ಪಡೆದ ಪದವೀಧರರು ಭಾಗವಹಿಸಿದ್ದರು. 1070 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದು, ಇವರಲ್ಲಿ 900 ಅಭ್ಯರ್ಥಿಗಳು ನೇರವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.

Home add -Advt

ಉದ್ಯೋಗ ಮೇಳದಲ್ಲಿ 717 ಅಭ್ಯರ್ಥಿಗಳನ್ನು ತಕ್ಷಣವೇ ಆಯ್ಕೆ ಮಾಡಿ ಉದ್ಯೋಗ ಪತ್ರಗಳನ್ನು ನೀಡಲಾಯಿತು.

ಡಾ. ರಮೇಶ ಎಸ್. ಮಾಂಗಳೇಕರ, ಡಾ. ಶಂಶುದ್ದೀನ್ ನಧಾಪ, ಡಾ. ಎನ್.ಆರ್. ಪಾಟೀಲ, ಡಾ. ವಿಜಯಲಕ್ಷ್ಮಿ ಕಲ್ಪತ್ರಿ, ಪ್ರಕಾಶ ಮಬನೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Back to top button