*ಪ್ಯಾಕೇಜ್ ಟೆಂಡರ್ ರದ್ದು ಪಡಿಸಿ: ಗುತ್ತಿಗೆದಾರರ ಸಂಘದಿಂದ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ಯಾಕೇಜ್ ಟೆಂಡರ್ ರದ್ದತಿಗೆ ಆಗ್ರಹಿಸಿ ಗುತ್ತಿಗೆದಾರರ ವಿವಿಧ ಸಂಘಟನೆ ವತಿಯಿಂದ ಶುಕ್ರವಾರ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಬೆಳಗಾವಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಗಾರ್ಡನ್ ನಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮಾಡಿದ ಗುತ್ತಿಗೆದಾರರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೋರ ಹಾಕಿದ್ದಾರೆ. ಪ್ಯಾಕೇಜ್ ಟೆಂಡರ್ ನಿಂದ ಎಲ್ಲ ವರ್ಗದ ಗುತ್ತಿಗೆದಾರಿಗೆ ಅನ್ಯಾಯ ಆಗುತ್ತೆ. ಪಾಲಿಕೆಯಲ್ಲಿ 47ಕೋಟಿ ಮತ್ತು 49.75ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಅದನ್ನ 1ಕೋಟಿಗೆ ಸೀಮಿತ ಮಾಡಬೇಕಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಕೆರೆಗಳ ಹೂಳು ಎತ್ತುವ ಪ್ಯಾಕೇಜ್ ಗೂ ವಿರೋಧಿಸಲಾಗಿದೆ. ಟೆಂಡರ್ ಕರೆಯದೇ ಪ್ಯಾಕೇಜ್ ಪ್ರಸ್ತಾವನೆ ಮಾಡ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಮಾಡಿರುವ ಕಾಮಗಾರಿ ಗುತ್ತಿಗೆ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಲಾಗಿದೆ.
ಇದಾದ ಬಳಿಕ ಮಹಾನಗರ ಪಾಲಿಕೆ ಮುಂದೆ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಾಗೂ ಗುತ್ತಿಗೆದಾರರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತೆ ಶುಭ ಬಿ ಅವರಿಗೆ ಮನವಿ ಸಲ್ಲಿಸಿದರು. ಆದರೆ ಗುತ್ತಿಗೆದಾದರರು ಪ್ಯಾಕೇಜ್ ಪ್ರಸ್ತಾವನೆ ರದ್ದಾಗುವರೆಗೆ ಪ್ರತಿದಿನ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನಡೆಸಿದರು.